ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 13 ಜನರ ಬಂಧನ

ಹುಣಸಗಿ,ಜೂ.1-ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 4 ವಾಹನ ಮತ್ತು 13 ಜನ ಆರೋಪಿಗಳನ್ನು ಬಂಧಿಸುವಲ್ಲಿ ನಾರಾಯಣಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ದೌಲತ್ ಎನ್.ಕೆ.ಮತ್ತು ನಾರಾಯಣಪುರ ಪಿಎಸ್ಐ ಸಿದ್ದೇಶ್ವರ ಗರ್ಡೆ ಅವರ ತಂಡ ದಾಳಿ ನಡೆಸಿ ಮುದ್ದೇಬಿಹಾಳದಿಂದ ಕವಿತಾಳಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 4 ಕಾರು ಮತ್ತು 13 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರಿನಲ್ಲಿದ್ದ 2 ಲಕ್ಷ 39000 ಸಾವಿರ ರೂಪಾಯಿ ಮೌಲ್ಯದ 589 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.
ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.