ಅಕ್ರಮವಾಗಿ ಮದ್ಯ ಮಾರಾಟ: ಬಂಧನ

ಕಲಬುರಗಿ,ಜು.17-ತಾಲ್ಲೂಕಿನ ಸೀತನೂರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಫರಹತಾಬಾದ ಪೊಲೀಸರು ಬಂಧಿಸಿದ್ದಾರೆ.
ರಮೇಶ ಮುತ್ತಗೂಡ ಎಂಬಾತನನ್ನು ಬಂಧಿಸಿ 1299 ರೂ.ಮೌಲ್ಯದ ಮದ್ಯ ಮತ್ತು 360 ರೂ.ನಗದು ಜಪ್ತಿ ಮಾಡಿದ್ದಾರೆ.
ಆರೋಪಿ ತನ್ನ ಮನೆಯ ಮುಂದೆ ಇರುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಕುಳಿತು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.