ಅಕ್ರಮವಾಗಿ ಮದ್ಯ ಮಾರಾಟ: ಧರ್ಮಾಪೂರದಲ್ಲಿ ಓರ್ವನ ಬಂಧನ

ಕಲಬುರಗಿ,ಮಾ.28-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಧರ್ಮಾಪೂರ ಗ್ರಾಮದ ಶರಣಬಸವೇಶ್ವರ ಗುಡಿಯ ಹತ್ತಿರದ ಬಯಲು ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಎಸ್‍ಐ ಅನೀಲ್ ಜೈನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸಿದ್ದರಾಮ ನಾಟೀಕಾರ (30) ಎಂಬಾತನನ್ನು ಬಂಧಿಸಿ 2040 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.