ಅಕ್ರಮವಾಗಿ ಮದ್ಯ ಮಾರಾಟಕ್ಕಾಗಿ ಸಾಗಾಣಿಕೆ ವಾಹನ ಮೇಲೆ ಅಬಕಾರಿ ದಾಳಿ

ಯಾದಗಿರಿ : ಏ.06 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

 ಪ್ರಕರಣ ಸಂ.01, 2024ರ ಏಪ್ರಿಲ್ 05 ರಂದು ಮಧ್ಯಾಹ್ನ12.30 ಗಂಟೆಗೆ ಮಾನ್ಯ ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಅವರು ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾ&ತ)  ಕಲಬುರ್ಗಿ ವಿಭಾಗ ಕಲಬುರ್ಗಿ ಅವರು ಆದೇಶ ಮೇರೆಗೆ ಹಾಗೂ ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆ ಯಾದಗಿರಿ ಅವರು ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಾಹಾಪುರ ಅವರು ಮಾರ್ಗದರ್ಶನದಲ್ಲಿ ಶ್ರೀ ಶರಣಗೌಡ ಬಿರಾದಾರ ಅಬಕಾರಿ ನಿರೀಕ್ಷಕರು ಹಾಗೂ ಶ್ರೀ ಸುರೇಶ ಕುಮಾರ ಮಳೇಕರ ಅಬಕಾರಿ ಉಪ ನಿರೀಕ್ಷಕರು, ಉಪ ವಿಬಾಗ ಶಹಾಪುರ, ಅಬಕಾರಿ ಮುಖ್ಯ ಪೇದೆಯಾದ ಶ್ರೀ ಮಡಿವಾಳಪ್ಪ, ವಾಹನ ಚಾಲಕರಾದ  ಶ್ರೀ ವೆಂಕಟೇಶ ಹಾಗೂ ಗೃಹ ರಕ್ಷಕ ಸಿಬ್ಬಂದಿಯಾದ ಶ್ರೀ ದೇವೆಂದ್ರ ರವರು ಕೂಡಿಕೊಂಡು ಶಹಾಪುರ ಪಟ್ಟಣದ ವಾಲ್ಮೀಕಿ ಚೌಕ್ ಹತ್ತಿರ ಗಸ್ತು ಮಾಡುತ್ತಿರುವಾಗ ದ್ವಿ ಚಕ್ರ ವಾಹನದ ಸಂಖ್ಯೆ. ಏಂ 33 ಇಃ 0681ರ ಮೇಲೆ ಅಕ್ರಮವಾಗಿ ಮದ್ಯವನ್ನು ಮಾರಾಟಕ್ಕಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಪ್ರಯುಕ್ತ ಅಬಕಾರಿ ದಾಳಿ ಮಾಡಿ 10.800 ಲೀಟರ ಮದ್ಯವನ್ನು ವಶಪಡಿಸಿಕೊಂಡು ಪರಶುರಾಮ್ ತಂದೆ ಚಂದ್ರಶೇಖರ್ ದೊಡ್ಡಮನಿ ಸಾ.ಬಿಧರಾಣಿ ತಾ.ಶಹಾಪುರ ರವರಿಂದ ಮುದ್ದೆಮಾಲು ಹಾಗೂ ವಾಹನವನ್ನು ವಶಪಡಿಸಿಕೊಂಡು ಪ್ರಕರಣವನ್ನು ಶ್ರೀ ಶರಣಗೌಡ ಬಿರಾದಾರ ಅಬಕಾರಿ ನಿರೀಕ್ಷಕರು ಉಪ ವಿಭಾಗ ಶಾಹಾಪುರ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.