ಅಕ್ರಮವಾಗಿ ಗೋವುಗಳ ಸಾಗಣೆ ಹಿಂದುಪರ ಸಂಘಟನೆಗಳಿಂದ ರಕ್ಷಣೆ

????????????????????????????????????

ಸಂಜೆವಾಣಿ ವಾರ್ತೆ
ಸಿರುಗುಪ್ಪ  ಸೆ 22 : ನಗರದ ಬೈಪಾಸ್ ರಸ್ತೆಯ ಆದೋನಿ ಮಾರ್ಗವಾಗಿ ಕಂಟೇನರ್‍ಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ತಡೆಹಿಡಿದು ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆಂದು ಪಿ.ಎಸ್.ಐ ಕೆ.ರಂಗಯ್ಯ ತಿಳಿಸಿದ್ದಾರೆ.
 ನಗರದ ಸಿಂಧನೂರು ರಸ್ತೆಯಿಂದ ಆದೋನಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಕೆಎ.03 ಎಎಚ್. 5046, ಹಾಗೂ ಕೆಎ.52 ಎ.2254 ನಂಬರಿನ ಈಚರ್ ಕಂಟೇನರ್ ವಾಹನಗಳನ್ನು ತಡೆದಾಗ ಒಳಗಡೆ ಗೋವುಗಳ ಶಬ್ದ ಕೇಳಿ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೋಲೀಸ್    ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
 ಇನ್ನೂ ಕೆಎ.36 9536, ಮತ್ತು ಕೆ.ಎ.34 ಎ.1982 ನಂಬರಿನ ಆಟೋಗಳಲ್ಲಿ ತಲಾ ಮೂರರಂತೆ ಒಂದು ಎಮ್ಮೆ, 5ಗೋವುಗಳನ್ನು ಕೆಂಚನಗುಡ್ಡ ಗ್ರಾಮದಲ್ಲಿ ಎರಡು ಆಟೋಗಳನ್ನು ತಡೆಹಿಡಿದು ಪೋಲೀಸರಿಗೆ ಒಪ್ಪಿಸಿದ್ದು, ನಂತರ ಪೋಲೀಸರು ಗೋವುಗಳನ್ನು ಸಮೀಪ ನ.64 ಹಳೆಕೋಟೆಯ ಶ್ರೀಮರಿತಾತ ಮಠದ ಗೋಶಾಲೆಗೆ ಕರೆದೊಯ್ದು ಶ್ರೀ ಮಠದ ಸುಪರ್ದಿಗೆ ವಹಿಸಿದ್ದಾರೆ.
 ಒಂದರಲ್ಲಿ 22, ಇನ್ನೊಂದರಲ್ಲಿ 19, ಗೋವುಗಳು, ಎತ್ತುಗಳು, ಮತ್ತು ಕರುಗಳನ್ನು ಮೂಟೆಗಳಂತೆ ಒಂದರ ಮೇಲೊಂದು ತುಂಬಿದ್ದು ಚಿಕ್ಕ ಕರುಗಳನ್ನು ಹಗ್ಗದಿಂದ ಬಿಗಿದ ಹೃದಯವಿದ್ರಾವಕ  ಘಟನೆಯನ್ನು ಕಂಡು ಶ್ರೀಮಠದ ಮಲ್ಲಿಕಾರ್ಜುನ ಸ್ವಾಮಿಗಳು ಕಣ್ಣೀರಿಟ್ಟರು, ಗ್ರಾಮಸ್ಥರೆಲ್ಲಾ  ಗೋವುಗಳನ್ನು ಕಟ್ಟಿ ಅವುಗಳಿಗೆ ನೀರು ಕುಡಿಸಿ ಮೇವು ನೀಡಿದರು.
 ಇದೇ ಸಂಧರ್ಭದಲ್ಲಿ ಹಳೆಕೋಟೆಯ ಶ್ರೀ ಮಠದ ಉತ್ತರಾಧಿಕಾರಿ ಸಿದ್ದಬಸವ ಸ್ವಾಮಿ ಪಿ.ಎಸ್.ಐ ಕೆ.ರಂಗಯ್ಯ, ಪೋಲೀಸ್ ಸಿಬ್ಬಂದಿಗಳಾದ ಬಸವರಾಜ, ಚಿನ್ನಪ್ಪ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಎನ್.ಆರ್.ಹೇಮನಗೌಡ, ಆನಂದಹೆಗಡೆ, ಎ.ಜೆ.ಮಂಜು, ಚನ್ನಬಸವ, ಕೆ.ಶಿವಕುಮಾರ, ಶಾಂತಸ್ವಾಮಿ, ದ್ಯಾಮನಗೌಡ, ಸೇರಿದಂತೆ ಗ್ರಾಮಸ್ಥರು ಇದ್ದರು.