ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಕಲಬುರಗಿ,ಜು.15-ನಗರದ ಕೋರಂಟಿ ಹನುಮಾನ ಮಂದಿರ ಹತ್ತಿರದ ಅಂಡರ್ ಬ್ರಿಡ್ಜ್‍ದಿಂದ ಕೃಷ್ಣ ನಗರದ ಕಡೆಗೆ ಹೋಗಿ ಬರುವ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪಿಎಸ್‍ಐ ವಂದನಾ ಮತ್ತು ಸಿಬ್ಬಂದಿ ಪಂಚರೊಂದಿಗೆ ದಾಳಿ ನಡೆಸಿ ರೆಹೆಮತ್ ನಗರದ ಮುಜಾಮಿಲ್ ಶುಕುರ್ ಎಂಬಾತನನ್ನು ಬಂಧಿಸಿ 3000 ರೂ.ಮೌಲ್ಯದ 226 ಗ್ರಾಂ.ಗಾಂಜಾ ಮತ್ತು 3000 ರೂ.ನಗದು ಜಪ್ತಿ ಮಾಡಿದ್ದಾರೆ.
ಬಾಪುನಗರದ ವಿನೇಶ್ ಎಂಬಾತನ ಬಳಿ 1,500 ರೂ.ಗೆ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದುದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.