ಅಕ್ರಮವಾಗಿ ಗಾಂಜಾ ಮಾರಾಟ: ಇಬ್ಬರ ಬಂಧನ

ಕಲಬುರಗಿ,ಅ.9-ನಗರದ ಎಂ.ಆರ್.ಎಂ.ಸಿ.ಮೆಡಿಕಲ್ ಕಾಲೇಜು ಎದರುಗಡೆಯ ಕಿರಾಣಾ ಮತ್ತು ಜನರಲ್ ಸ್ಟೋರ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಸಂತೋಷ ಬನ್ನಟ್ಟಿ, ಪಿಐ ದಿಲೀಪಕುಮಾರ, ಸಿಬ್ಬಂದಿಗಳಾದ ಯಲ್ಲಪ್ಪ, ಅಶೋಕ ಕಟಕೆ, ಶಿವಕುಮಾರ, ಶ್ರೀಶೈಲ, ಅಂಬಾಜಿ, ಅರವಿಂದ, ವಿಶ್ವನಾಥ, ನಾಗರಾಜ, ಅಶೋಕ, ಸುನೀಲಕುಮಾರ ಅವರು ಪಂಚರೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಕಾಳಗಿ ತಾಲ್ಲೂಕಿನ ಲಕ್ಷ್ಮಣ ನಾಯಕ ತಾಂಡಾದ ಸತೀಶ ಚವ್ಹಾಣ್ (23) ಮತ್ತು ಶಹಾಬಾದ್ ರಸ್ತೆಯ ಬಂಜಾರ್ ಲೇಔಟ್‍ನ ಆಶೀಶ್ ರಾಠೋಡ್ ಎಂಬುವವರನ್ನು ಬಂಧಿಸಿ 25 ಸಾವಿರ ರೂ.ಮೌಲ್ಯದ 2 ಕೆಜಿ 500 ಗ್ರಾಂ.ಗಾಂಜಾ, ಒಂದು ಬೈಕ್ ಸೇರಿ 30 ಸಾವಿರ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ 3 ಸಾವಿರ ಮತ್ತು 8 ಸಾವಿರ ರೂ.ಮೌಲ್ಯದ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.