ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ

ಸಂಜೆವಾಣಿ ವಾರ್ತೆ
ಚಾಮರಾಜನಗರ ಆ.15:- ಜಮೀನೊಂದನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಕಾರಯ್ಯ, ಪಿ.ಸೋಮಣ್ಣ ಹಾಗೂ ಪಿ. ಮಹೇಶ್ ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ರಾಮಸಮುದ್ರದ ಯಜಮಾನರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರಾಮಸಮುದ್ರದಿಂದ ಮೆರವಣಿಗೆ ಹೊರಟ 27ನೇ ವಾರ್ಡಿನಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ಯಜಮಾನರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ರಾಮಸಮುದ್ರದ ಲೇಟ್ ತಗಡೂರಯ್ಯ ಹಾಗೂ ಲೇಟ್ ಪುಟ್ಟಮಾದಯ್ಯ ಇವರು ಸಹೋದರರಾಗಿದ್ದು, ಇವರಿಗೆ ಸಾಗುವಳಿಯಲ್ಲಿ 3 ಎಕರೆಜಮೀನು ಹೊಂದಿದ್ದು, ಈ ಆಸ್ತಿಯಲ್ಲಿ ಸಿದ್ದಯ್ಯ, ಮಹದೇವಯ್ಯ, ಶಿವಯ್ಯ ಹಾಗೂ ಬಿಲ್ಲಯ್ಯ ವ್ಯವಸಾಯ ಮಾಡಿಕೊಂಡುಜೀವನ ಸಾಗಿಸುತ್ತಿದ್ದಾರೆ, ಮಹದೇವಯ್ಯ ಹಾಗೂ ಶಿವಯ್ಯ ಆರೋಗ್ಯ ಸಮಸ್ಯೆಯಿಂದ ವ್ಯವಸಾಯ ಮಾಡದೆಇದ್ದಾಗ ಪುಟ್ಟಮಾದಯ್ಯನವರ ಮಕ್ಕಳಾದ ಕಾರಯ್ಯ, ಪಿ.ಸೋಮಣ್ಣ, ಪಿ. ಮಹೇಶ ಎಂಬುವವರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಸಂಬಂಧ ಸಿದ್ದಯ್ಯ ಹಾಗೂ ಬಿಲ್ಲಯ್ಯ ಪಂಚಾಯತಿಗೆ ದೂರು ನೀಡಿದ್ದರು. ಅದರಂತೆ ಅವರನ್ನು ಪಂಚಾಯಿತಿಗೆ ಕರೆಯಿಸಿ ತಿಳುವಳಿಕೆ ನೀಡಿದ್ದರೂಗ್ರಾಮಸ್ಥರನ್ನು ಉಡಾಫೆಯಿಂದ ಮಾತನಾಡಿರುತ್ತಾರೆ. ಅಲ್ಲದೆ ಸಿದ್ದಯ್ಯ, ಬಿಲ್ಲಯ್ಯನವರಿಗೆ ಈ ವಿಚಾರವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದೇವೆ.
ನಂತರ ಈ ಮೇಲ್ಕಂಡ ಪಿ ಮಹೇಶ್ ಎಂಬ ವ್ಯಕ್ತಿಯು ಜಮೀನು ನನಗೆ ಸೇರಿದ್ದು ಎಂದು ನಾವುಗಳು ಒಪ್ಪುವುದಿಲ್ಲ ಎಂದು ನ್ಯಾಯ ಪಂಚಾಯ್ತಿ ತಿರಸ್ಕರಿಸಿ ಹೋಗಿರುತ್ತಾರೆ. ಗ್ರಾಮದಲ್ಲಿಅಶಾಂತಿಯನ್ನುಉಂಟು ಮಾಡಿ ನನ್ನನ್ನು ಬಹಿμÁ್ಕರ ಹಾಕಿದ್ದಾರೆಎಂದು ಸುಳ್ಳು ದೂರು ನೀಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುತ್ತಾರೆ, ಆದರೆ ಇದು ಸತ್ಯಕ್ಕೆದೂರವಾದ ವಿಚಾರವಾಗಿರುತ್ತದೆ. ಈ ಸಂಬಂಧ ಗ್ರಾಮಸ್ಥರು ಯಜಮಾನರುಗಳಿಗೆ ಪಿ. ಮಹೇಶ ತೇಜೋವಧೆ ಮಾಡಿಗ್ರಾಮದಲ್ಲಿ ಅಶಾಂತಿಯನ್ನು ಉಂಟು ಮಾಡಿರುತ್ತಾರೆ, ಅಲ್ಲದೆಇದಕ್ಕೆ ಕೈಜೋಡಿಸಿ ಇನ್ನೂ ಎರಡು ಕುಟುಂಬಗಳನ್ನು ಗ್ರಾಮಸ್ಥರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಬಹಿμÁ್ಕರಇರುವುದಿಲ್ಲ ಸಾಮಾಜಿಕ ನ್ಯಾಯವಿದೆ, ನ್ಯಾಯ ಪದ್ಧತಿ ಬಿಟ್ಟರೆ ಬೇರೆಯಾವುದೇರೀತಿಯ ಬಹಿμÁ್ಕರಗಳಿರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಯಜಮಾನರಾದ ಚನ್ನಂಜಯ್ಯ, ರೇವಣ್ಣ, ಮಹದೇವು, ನಾಗರಾಜು, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.