ಅಕ್ಕ ಮಹಾದೇವಿ ಜಯಂತಿ ಆಚರಣೆ

ಧಾರವಾಡ ಎ.28-ಅಕ್ಕ ಮಹಾದೇವಿಯ ಜೀವನ ಆದರ್ಶವಾಗಿತ್ತು.ಮಹಿಳಾ ಸಬಲೀಕರಣ ಸಲುವಾಗಿ 12ನೇ ಶತಮಾನದ ಪರ್ವಕಾಲದಲ್ಲಿ ಸಮಾನತೆಯ ಹರಿಕಾರ,ವೀರಶೈವ ಧರ್ಮದ ಉದ್ಧಾರಕ ಮಹಾತ್ಮ ಬಸವೇಶ್ವರರ ಶರಣ ಬಳಗದಲ್ಲಿ ಅಕ್ಕಮಹಾದೇವಿ ಮುಂಚೂಣಿಯಲ್ಲಿದ್ದು ಸಮಾನತೆಗೆ ಒತ್ತುಕೊಟ್ಟು ಕೆಲಸ ಮಾಡಿದ ಮಹಿಳಾ ಪ್ರತಿನಿಧಿಯಾಗಿದ್ದರು.ಜಗತ್ತಿನ ಪ್ರಥಮ ವಚನ ಸಾಹಿತ್ಯದ ಲೇಖಕಿ ಅನ್ನುವುದು ಮಹಿಳೆಯರಿಗೆ ಹೆಮ್ಮೆಯ ವಿಷಯ ಎಂದು ಎಸ್ ಎಚ್ ಪಾಟೀಲ ಮಾತನಾಡಿದರು.
“ಶಿವಶರಣೆ ಅಕ್ಕಮಹಾದೇವಿ ಜಯಂತಿ “ತನ್ನಿಮಿತ್ತ ಧಾರವಾಡ ಜಿಲ್ಲಾ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಲಿಂಗಾಯತ ಭವನದಲ್ಲಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಸಮಾಜದ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಹಿರಿದಾದದು ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ನಿಲ್ಲಬಲ್ಲರೆಂಬ ಪ್ರತಿಜ್ಞೆಯನ್ನು 800 ವರ್ಷಗಳ ಹಿಂದೇಯೆ ಮಾಡಿಸಿದ ಕರ್ನಾಟಕದ ಪ್ರಥಮ ಮಹಿಳೆಯೆಂದರೆ ಅಕ್ಕ ಮಹಾದೇವಿ ಎಂದು ಪಾಟೀಲರು ಹೇಳಿದರು.
ಶಂಕರ ಕುಂಬಿರವರು ಮಾತನಾಡಿ ಹನ್ನೇರಡನೆ ಶತಮಾನದಲ್ಲಿ ಮಹಿಳಾ ಜಾಗ್ರತಿ ಮೂಡಿಸಿ ಸಂಸಾರ ತೇಜಿಸಿ ಚನ್ನಮಲ್ಲಿಕಾರ್ಜುನ ದೇವರೆ ನನ್ನನ್ನು ಪತಿಯೆಂದು ನಂಬಿದರು ತಮ್ಮ ವೈರಾಗ್ಯದ ಮೂಲಕವೆ ಪುರುಷರೊಡನೆ ಸಮಾಜೋದಾರಕ ಕಾರ್ಯದಲ್ಲಿ ಅಕ್ಕ ಮಹಾದೇವಿ ತೊಡಗಿದ್ದರು.
ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿ ಲಿಂಗ ಬೇದವಿಲ್ಲದೆ ಜಾತಿ ಬೇದವಿಲ್ಲದೆ ಪ್ರತಿಯೂಬ್ಬರಿಗು ಲೋಕ ವಿಚಾರ ಅರಿಯುವಂತೆ ಮಾಡಿದರು ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನ ಗಳಿಸಿಕೊಟ್ಟರು ಎಂದರು. ಅಕ್ಕಮಹಾದೇವಿ ಶರಣ ಚಳುವಳಿಯ ಪ್ರಮುಖರಾಗಿ ಸ್ವಾಭಿಮಾನದ ಪ್ರತಿಕವಾಗಿ ಸ್ತ್ರೀವಾದಿ ಚಳುವಳಿಯ ನಿಜವಾದ ಪ್ರತಿಪಾದಿಯಾಗಿ ಅಕ್ಕರೆಯ ಅಕ್ಕನಾಗಿ ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ ಎಂದು ಕುಂಬಿಯವರು ಹೇಳಿದರು.
ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಜಯಶ್ರೀ ಪಾಟೀಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಘಟಕದ ಕೋಶಾಧ್ಯಕ್ಷರಾದ ಬಿ.ಎಸ್.ಗೋಲಪ್ಪನವರ, ಉಪಾಧ್ಯಕ್ಷರಾದ ಶಶಿಕಲಾ ಶಾಸ್ತ್ರಿಮಠ ವಚನ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣಾ ಪರಪ್ಪಗೌಡರ, ಗೀತಾ ಕುಂಬಿ, ಬಸಂತಿ ಹಪ್ಪಳದ, ಅನಿಲ ಅಂಗಡಿ, ಶಾಂತವೀರ ಬೆಟಗೇರಿ, ವೀರಣ್ಣ ವಡ್ಡಿನ ಮುಂತಾದವರು ಭಾಗಿಯಾಗಿದ್ದರು.ಕೊನೆಯಲ್ಲಿ ಸುವರ್ಣಾ ಬಿರಾದಾರ ಅವರು ವಂದಿಸಿದರು.