ಅಕ್ಕ ಅನ್ನಪೂರ್ಣ ನಿಧನಕ್ಕೆ ಸಂತಾಪ

ಕಲಬುರಗಿ :ಮೇ.23: ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತನ್ನ ಜೀವನದ ಉಸಿರನ್ನಾಗಿಸಿಕೊಂಡು ಸದಾಕಾಲ ಪ್ರವಚನ, ಲಿಂಗ ಪೂಜೆಯಲ್ಲಿ ತೊಡಗಿ ಜನರಲ್ಲಿ ಅದರ ಅರಿವನ್ನುಂಟು ಮಾಡುತ್ತ ಹಸನ್ಮುಖಿಯಾಗಿರುತ್ತಿದ್ದ ಅಕ್ಕ ಅನ್ನಪೂರ್ಣ ಅವರು ಲಿಂಗೈಕ್ಯರಾದುದು ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಬಸವಾದಿ ಶರಣರು, ಮಹಾದಾಸೋಹಿ ಶರಣಬಸವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು ತಿಳಿಸಿದ್ದಾರೆ.