ಅಕ್ಕ ಅನ್ನಪೂರ್ಣರಿಗೆ ಶ್ರದ್ಧಾಂಜಲಿ

ಚಿಂಚೋಳಿ,ಮೇ 24:ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವ ಸೇವಾ ಪ್ರತಿಷ್ಠಾಪನ ಮತ್ತು ಲಿಂಗಾಯತ ಮಹಾ ಮಂಟಪವನ್ನು ಹುಟ್ಟು ಹಾಕಿ ಬಸವ ಪ್ರಜ್ಞೆಜಾಗೃತಗೊಳಿಸಿದ ಅಕ್ಕ ಅನ್ನಪೂರ್ಣ ತಾಯಿ ಅವರ ನಿಧನಕ್ಕೆ ತಾಲೂಕ ವೀರಶೈವ ಸಮಾಜ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಸ್ ಎನ್ ದಂಡಿನ್ ಕುಮಾರ, ಮತ್ತು ಕಾಶಿನಾಥ್ ಹುನಜೆ, ಅವರು ಮಾತನಾಡಿ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ, ಅವರ ನಿಧನದಿಂದ ಕಲ್ಯಾಣ ಕರ್ನಾಟಕದ ಬಸವ ಅಭಿಮಾನಿಗಳಿಗೆ ತುಂಬಲಾರದ ಆಘಾತವಾಗಿದ್ದು ಬಸವ ಬಸವ ತತ್ವದ ಪ್ರಚಾರವು ಮಹಾರಾಷ್ಟ್ರ ಆಂಧ್ರ ಪ್ರದೇಶ್ ಮತ್ತು ತೆಲಂಗಾಣ ಸುರಿದಂತೆ ಅನೇಕ ರಾಜ್ಯಗಳಲ್ಲಿ ಭಾಗದಲ್ಲಿ ಬಸವ ಸೇವಾ ಪ್ರತಿಷ್ಠಾಪನ ಮತ್ತು ಲಿಂಗಾಯತ ಮಹಾ ಮಂಟಪವನ್ನು ಹುಟ್ಟು ಹಾಕಿ ಬಸವ ಪ್ರಜ್ಞೆ
ಜಾಗೃತಿಗೊಳಿಸಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ರಾಷ್ಟ್ರೀಯ ಬಸವದಳ ಅಧ್ಯಕ್ಷ ನಂದಿಕುಮಾರ ಪಾಟೀಲ, ವೀರಶೈವ ಯುವ ವೇದಿಕೆ ಅಧ್ಯಕ್ಷ ಶಂಕರ ಶಿವಪೂರಿ, ಸಮಾಜದ ಹಿರಿಯ ಮುಖಂಡರಾದ ಭೀಮರಾವ್ ಪಾಟೀಲ್, ಸಚ್ಚಿದಾನಂದ ಸುಂಕದ, ಸುರೇಶ ಸುಂಕದ್, ಜಗ್ಗು ಶಾಲೆಬೀರನಹಳ್ಳಿ, ಮಾಂತೇಶ್ ಎಂಪಳ್ಳಿ, ಬಸವರಾಜ್ ಅಡಕಿ, ಬಸವರಾಜ ಚೆನ್ನೂರ್, ಶಿವಕುಮಾರ್ ದಂಡಿನ, ವಿಶ್ವನಾಥ ರೆಡ್ಡಿ, ರಘು ಪಾಟೀಲ್, ಬಸವ ಅಭಿಮಾನಿಗಳಾದ ಕಿಷ್ಟಪ್ಪ ಪೂಜಾರಿ, ಯಲ್ಲಾಲಿಂಗ, ಮತ್ತು ಅನೇಕ ಬಸವ ಅಭಿಮಾನಿಗಳು ಇದ್ದರು