ಅಕ್ಕಿ ತೊಳೆದ ನೀರಿನಿಂದ ಹೀಗೆ ಮಾಡಿ ನೋಡಿ…..

ಅಕ್ಕಿ ತೊಳೆದ ನೀರು ಅಂದ್ರೆ ಈಗಾಗಲೇ ಎಲ್ಲರಿಗೂ ಗೊತ್ತಾಗಿರುತ್ತೆ. ಅದನ್ನು ಹೇಗೆ ತಯಾರಿಸೋದು ಅಂತ ಪ್ರತ್ಯೇಕವಾಗಿ ಯಾರಿಗೂ ಹೇಳಬೇಕಾಗಿಲ್ಲ. ಪ್ರತಿ ದಿನ ಅನ್ನ ಮಾಡುವಾಗ ಅಕ್ಕಿ ತೊಳೆದೇ ತೊಳಿತೀವಿ, ಆದ್ರೆ ಆ ನೀರನ್ನು ಸುಮ್ಮನೆ ಎಸೆದು ಬಿಡ್ತೀವಿ. ಆದರೆ ಅದರಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬಹುದು.

ಹೌದು!, ಇದು ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಸುಲಭ ವಿಧಾನ ಇದು. ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ. ಟ್ರೈ ಮಾಡಿ ನೋಡಿ.

ಅಕ್ಕಿ ತೊಳೆದ ನೀರಿನಲ್ಲಿ ಕೂದಲು ತೊಳೆಯುವುದರಿಂದಾಗಿ ಭವಿಷ್ಯದಲ್ಲಾಗುವ ಕೂದಲುದುರುವಿಕೆಯನ್ನು ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಅಕ್ಕಿ ತೊಳೆದ ನೀರಿನಲ್ಲಿರುವ ಅಮೈನೋ ಆಸಿಡ್ ಅಂಶಗಳುನ ಕೂದಲಿನ ಬೇರನ್ನು ಗಟ್ಟಿಗೊಳಿಸುತ್ತೆ ಮತ್ತು ಕೂದಲು ದಪ್ಪವಾಗಿ, ಸಿಲ್ಕಿಯಾಗಿ ಬೆಳೆಯಲು ನೆರವಾಗುತ್ತೆ.ಕೇವಲ ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ಕೂಡ ಅಕ್ಕಿ ತೊಳೆದ ನೀರಿನಿಂದ ಹಲವು ಲಾಭಗಳಿವೆ. ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಿಸುವ ಸಾಮರ್ಥ್ಯ ಅಕ್ಕಿ ತೊಳೆದ ನೀರಿಗಿದೆ.
ತ್ವಚೆಯಲ್ಲಿ ಕೆರೆತದಂತ ಸಮಸ್ಯೆಗಳಿದ್ದಲ್ಲಿ ಕೂಡ ಅಕ್ಕಿ ತೊಳೆದ ನೀರು ಉತ್ತಮ ಪರಿಹಾರವನ್ನು ನೀಡುತ್ತದೆ. ಮುಖದಲ್ಲಿ ಕೆಂಪು ಗುಳ್ಳೆಗಳಾಗುವುದು ಮತ್ತು ಉರಿತ, ತುರಿಕೆಯನ್ನು ಈ ನೀರು ಶಮನಗೊಳಿಸುತ್ತದೆ. ತ್ವಚೆಯ ರೋಗಗಳಿಂದ ಬಳಲುತ್ತಿರುವವರು ೧೫ ನಿಮಿಷಗಳ ಕಾಲ ಎರಡು ದಿನಕ್ಕೊಮ್ಮೆ ಅಕ್ಕಿ ತೊಳೆದ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಬಹುದಾಗಿದೆ.

ಇದರಲ್ಲಿ ಆಂಟಿಯೋಕ್ಸಿಡೆಂಟ್‌ಗಳಿದ್ದು ಆಂಟಿಸೆಪ್ಟಿಕ್ ಅಂಶಗಳು ಮೊಡವೆಯನ್ನು ಸಂಪೂರ್ಣವಾಗಿ ನಿವಾರಿಸಲಿದೆ. ಒಂದು ರಾತ್ರಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸದೇ ಇದ್ದರೂ ನಿಧಾನಕ್ಕೆ ಮೊಡವೆಗಳನ್ನು ಅದರ ಕಲೆಗಳನ್ನು ಮಾಯವಾಗಿಸುತ್ತದೆ.

ಅಕ್ಕಿತೊಳೆದ ನೀರು ತ್ವಚೆಯ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ ಅಂತೆಯೇ ಬಿಳಿಮಚ್ಚೆ ಮತ್ತು ಕಲೆಗಳಿಗೂ ಇದು ಅತ್ಯದ್ಭುತ ಎಂದೆನಿಸಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಿ ಅಂಶಗಳು ಬಿಳಿಕಲೆ ಮತ್ತು ಮಚ್ಚೆಯನ್ನು ಹೋಗಲಾಡಿಸಿ ಸ್ವಚ್ಛ ಸುಂದರ ಮೈಕಾಂತಿಯನ್ನು ನೀಡಲಿದೆ.