ಕರಾಟೆಯಲ್ಲಿ ಬ್ಲಾಕ್ ಬ್ಲೆಲ್ಟ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ

ಸಿರುಗುಪ್ಪ ಡಿ 26 : ನಗರದ ಸದಾಶಿವ ನಗರದ ಓಕಿನವಾ ಕರಾಟೆ ತರಭೇತಿ ಕೇಂದ್ರದಲ್ಲಿ ತರಭೇತಿ ಪಡೆದ ವಿದ್ಯಾರ್ತಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಬ್ಲಾಕ್ ಬ್ಲೆಲ್ಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 5 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ಶಿವಕುಮಾರ ಬಳಿಗಾರ್ ಮಾತನಾಡಿ, ಮನುಷ್ಯ ನಿತ್ಯ ಸಂತೋಷಿಯಾಗಿರಬೇಕಾದರೆ ಮಾನಸಿಕ ಮತ್ತು ದೈಹಿಕ ಸಧೃಡತೆ ಅಗತ್ಯವಿದ್ದು, ಪ್ರತಿಯೊಬ್ಬರು ನಿತ್ಯವೂ ಕರಾಟೆ, ಯೋಗ ಸೇರಿದಂತೆ ಇತರೆ ವ್ಯಾಯಮಗಳ ಮೂಲಕ ದೈಹಿಕವಾಗಿ ಸದೃಢತೆ ಹೊಂದಿದರೆ, ತರಭೇತಿಯ ಅವಧಿಯಲ್ಲಿ ಶಿಕ್ಷಕರು ತಿಳಿಸುವ ಮಾರ್ಗದರ್ಶನದಲ್ಲಿ ನಿತ್ಯವೂ ತಾವೆಲ್ಲ ನಡೆದಲ್ಲಿ ಮಾನಸಿಕವಾಗಿಯೂ ಸಂತೋಷವಾಗಿರಲು ಸಾಧ್ಯ ಎಂದು ತಿಳಿಸಿದರು.
ಎಎಸ್‍ಐ ಸೂರ್ಯನಾರಾಯಣ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಪ್ರತಿಯೊಬ್ಬರು ಕರಾಟೆ ತರಭೇತಿ ಪಡೆಯುವ ಮೂಲಕ ವಿಶೇಷವಾಗಿ ಮಹಿಳೆಯರು ಇತರರಿಂದ ಉಂಟಾಗುವ ತೊಂದರೆಯಿಂದ ಪಾರಾಗಲು ಸಹಕಾರಿಯಾಗಿದೆ, ಕಾರಣ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕರಾಟೆ ತರಭೇತಿ ನೀಡುವ ಮೂಲಕ ಆತ್ಮರಕ್ಷಣೆಯ ಕೌಶಲ್ಯವನ್ನು ಮೈಗೂಡಿಸಿಕೊಳ್ಳಲು ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕೆಜೆ ಕಾಲೇಜು ಪ್ರಾಚಾರ್ಯ ಶಾಂತನಗೌಡ, ಹಿರಿಯ ಲೆಕ್ಕಪರಿಶೋಧಕ ಕೆ.ನಾಗನಗೌಡ, ಶಿವಪೂಜಮ್ಮವ್ವ, ಕರಾಟೆ ತರಭೇತಿದಾರ ಮಲ್ಲಿಕಾರ್ಜುನ ಹಿರೇಮಠ ಇದ್ದರು.
ಬ್ಲಾಕ್ ಬ್ಲೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಅಕ್ಷತಾ ಹಿರೇಮಠ, ಕುಮಾರಿ ಅಮೃತ ಹಿರೇಮಠ, ಡಾ. ನಿಟ್ಟೂರು ಅದಿಲಕ್ಷ್ಮೀ, ಶಿವಪ್ರಸಾದ್, ಶ್ರೀನಿವಾಸರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಅಕರ್ಷಣೆ: ಇದೇ ವೇಳೆ ತರಭೇತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾಟೆ ಕೌಶಲ್ಯ ನೋಡುಗರನ್ನು ಗಮನ ಸೆಳೆಯಿತು.