ಅಕ್ಕಾ ನನಗೆ ಓಟು ಹಾಕಿ: ಮಹಿಳಾ ಮತದಾರರ ಮನ ಗೆಲ್ಲುತ್ತಿರುವ ಶ್ರವಣಕುಮಾರ್ ರೆಡ್ಡಿ

ಬಳ್ಳಾರಿ, ಏ.23: ನಗರದ 18 ನೇವಾರ್ಡಿನ ಬಿಜೆಪಿ ಅಭ್ಯರ್ಥಿ ಗಾಲಿ ಶ್ರವಣಕುಮಾರ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಅಕ್ಕಾ ಓಟು ಹಾಕಿ, ಅಮ್ಮಾ ಓಟು ಹಾಕಿ, ಅವ್ವಾ ಓಟು ಹಾಕಿ ಎನ್ನುತ್ತ ಮಹಿಳಾ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಅಭಿವೃದ್ದಿಗೆ ಏನೆಲ್ಲ ಮಾಡಿದೆ. ಈ ಹಿಂದೆ ಏನು ಮಾಡಿತ್ತು ಎನ್ನುವ ಚುನಾವಣಾ ಪ್ರಣಾಳಿಕೆ ಕರಪತ್ರ ನೀಡುವುದರ ಜೊತೆಗೆ. ಮತ ಯಂತ್ರದಲ್ಲಿ ತಮಗೆ ಹೇಗೆ ಮತ ಹಾಕಬೇಕು. ಎನ್ನುವುದನ್ನು ವಿವರಿಸಿ. ತಮಗೆ ಮತ ನೀಡಿ. ಈ ವಾರ್ಡಿನ ಅಭಿವೃದ್ದಿ ಹೇಗೆ ಮಾಡಲಾಗುವುದು ಎಂಬ ತನ್ನ ಕನಸಿನ ಯೋಜನೆಗಳನ್ನು ಅವರು ಮತದಾರರ ಮುಂದೆ ವಿವರವಾಗಿ ಹೇಳಿದರು.
ವಯಸ್ಸಿನಲ್ಲಿ ಚಿಕ್ಕವರಾದರೂ ಹೇಗೆ ತಂದೆಯಂತೆ ನಗರದ ಅಭಿವೃದ್ದಿ ಬಗ್ಗೆ ತಿಳಿಸುತ್ತ ವಿನಯದಿಂದ ಮತ ಕೇಳುತ್ತಿರುವುದು ಮಹಿಳಾ ಮತದಾರರನ್ನು ಮಂತ್ರಮುಗ್ದರನ್ನಾಗಿಸಿದೆ.