ಅಕ್ಕಮಹಾದೇವಿ ವಚನಗಳನ್ನು ಉರ್ದು ತರ್ಜುಮೆಗೆ ಸಹಕರಿಸಿದ್ದ ಸಾಹಿತಿ ಕುಷ್ಟಗಿ ನಿಧನದಿಂದ ತುಂಬಲಾಗದ ಹಾನಿ ; ಕೃಷ್ಣ ಕೋಲಾರ್

ವಿಜಯಪುರ ;ಜೂ.5: ನಾಡಿನ ಕನ್ನಡ ಮತ್ತು ಉರ್ದು ಭಾಷೆಯೊಂದಿಗೆ ಭಾವೈಖ್ಯತೆ ಸೃಷ್ಠಿಸಿದ್ದ ಮತ್ತು ಶಿವಶರಣೆ ಅಕ್ಕಮಹಾಹೇವಿ ಅವರ ವಚನಗಳನ್ನು ಉರ್ದು ಭಾಷೆಗೆ ತರ್ಜುಮೇ ಮಾಡಲು [ಬಾಷಾಂತರಿಸಲು]ಸಹಕರಿಸಿದ್ದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹಿರಿಯ ಸಾಹಿತಿ ಶ್ರೀ ಕೃಷ್ಣ ಕೊಲಾರ್ ಕುಲಕರಣಿ ಅವರು ಹೇಳಿದರು.

ಅವರು ಭೃಂಗಿಮಠ ಕ್ರಿಯಾತ್ಮಕ ವೇದಿಕೆಯು ಹಮ್ಮಿಕೊಂಡಿದ್ದ ಫೋನ್ ಲೈನ್- ಆನ್ ಲೈನ್ ನುಡಿನಮನ ಕಾರ್ಯಕ್ರಮದಲ್ಲಿ ಜಂಗಮವಾಣಿಯಿಂದಲೇ ಮಾತನಾಡುತ್ತಿದ್ದರು.

ವಸಂತ ಕುಷ್ಟಗಿ ಅವರೊಂದಿಗೆ 50 ವರ್ಷಗಳಿಂದ ನಮ್ಮ ಸ್ನೇಹವಿತ್ತು ಅವರೊಬ್ಬ ಬಾಷಾ ಭಾವೈಕ್ಯತೆಯ ವ್ಯಕ್ತಿಯಾಗಿದ್ದರು, ಉರ್ದು ಅಕಾಡೆಮಿ ಇದ್ದಾಗ ಶರಣೆ ಅಕ್ಕಮಹಾದೇವಿ ಅವರ ವಚನಗಳನ್ನು ಉರ್ದುವಿಗೆ ಭಾಷಾಂತರಿಸಲು ಮತ್ತು ಆದಿಲ್ ಶಾಹಿ ಅವರ ಕಾಲದ ಉರ್ದು ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಲು ಅವರು ತುಂಬಾ ಸಹಕಾರ ನೀಡಿದ್ದರು ಈ ಮೂಲಕ ನಾಡಿಗೆ ಮನೆ ಮಾತಾಗಿದ್ದ ವಸಂತ ಕುಷ್ಟಗಿ ಅವರ ಸೇವೆ ಇನ್ನು ಸ್ವಲ್ಪ ದಿವಸ ನಾಡಿಗೆ ಅಗತ್ಯವಾಗಿತ್ತು ಎಂದರು.

ಕಪ್ಪು ಕೋಟಿನ ಕವಿ ನ್ಯಾಯವಾಗಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ನಾವು ವಸಂತ ಕುಷ್ಟಗಿ ಅವರ ಜೊತೆಗೂಡಿ ಹತ್ತು ಹಲವು ಸಾಹಿತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದದ್ದನ್ನು ನೆನಪಿಸಿz, ಸದಾ ಕುಷ್ಟಗಿ ಅವರು ಯುವಕರಿಗೆ ಹುರಿದುಮ್ಮಿಸುತ್ತಿದ್ದರು. ಉರ್ದು ಭಾಷೆಯನ್ನು ಚನ್ನಾಗಿ ಬರೆಯುವ ಮತ್ತು ಓದ ಬಲ್ಲ ಭಾಷಾ ತಜ್ಷರಾಗಿ ರಾಜ್ಯದಲ್ಲಿ ಹೆಸರು ಮಾಡಿದ್ದರು, ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಛಾಪು ಮೂಡಿಸಿದರು, ವಿಶೇಷವಾಗಿ ದಾಸ ಸಾಹಿತ್ಯದ ಮೇಲೆ ಬೆಳಕು ಛಲ್ಲಿದ ಕೀರ್ತಿ ಕುಷ್ಟಗಿ ಅವರಿಗೆ ಸಲ್ಲುತ್ತದೆ. ರಮಾನಂದ ತೀರ್ಥರ ಸಂಶೋಧ ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದರು. ಅವರಿಗೆ ಕಾವ್ಯ ಪ್ರಶಸ್ತಿ, ರತ್ನಾಕರ ವರ್ಣಿ ಮುದ್ದಣ್ಣ ಪ್ರಶಸ್ತಿ,ಸರ್ ಎಮ್ ವಿಶ್ವೇಶ್ವರಯ್ಯ ಪ್ರಶಸ್ತಿ,ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದವು.ಭಕ್ತಿಗೋಪುರ, ಹೊಸಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯಬಾನು, ಐದ್ಹತ್ತು, ಕಥಾಸಮೂಹ , ತವಗಶ್ರೀ. ಇತ್ಯಾದಿ ಕೃತಿಗಳನ್ನು ಅವರು ಬರೆದಿದ್ದರು ಎಂದು ನೆನಪಿಸಿದರು. ಕುಷ್ಟಗಿ ಅವರು ಉರ್ದು ಅಕಾಡೆಮಿ ಸದಸ್ಯರಾಗಿದ್ದದ್ದು ವಿಶೇಷವಾಗಿತ್ತು ಎಂದರು.

ಹಿರಿಯ ಸಾಹಿತಿ ಸಂಗಮೇಶ ಬದಾಮಿ ಅವರು ಮಾತನಾಡಿ ವಸಂತ ಕುಷ್ಟಗಿ ಅವರು ವಿಕಲಚೇತನರಾಗಿದ್ದರೂ ಸಹ ಸಾಹಿತ್ಯ ಸೇವೆ ಮಾಡಿ ಮಾದರಿಯಾಗಿದ್ದರು. ಸಮಾಜಕ್ಕೆ ಮೌಲಿಕತೆಯ ಶಬ್ದಗಳನ್ನು ಸಹ ನೀಡಿದ್ದರು. ಅವರ ಭಾಷಣದಲ್ಲಿಯ ವಿಷಯ ಮಂಡನೆ ಸ್ಪಷ್ಟತಯಿಂದ ಕೂಡಿರುತ್ತಿತ್ತು ಅವರು ಯುವ ಸ್ನೇಹಿತರನ್ನು ಸಹ ಪ್ರೀತಿಯಿಂದ ಗೌರವಿಸುತ್ತಿದ್ದರು, ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಎಂದು ಹೆಳಿದರು.

ಹಿರಿಯ ಇತಿಹಾಸಕಾರ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಿ. ಎನ್.ಅಕ್ಕಿ ಅವರು ಮಾತನಾಡಿ ಅವರು ಪ್ರಯತ್ನಶೀಲರಾಗಿದ್ದರು. ಜಾತ್ಯಾತೀತರಾಗಿದ್ದರು ದೇಶದಲ್ಲಿಯೇ ಕ್ಯಾತನಾಮರಾದ ವಿ.ಜಿ ಅಂದಾನಿ, ಬಸವರಾಜ ಉಪ್ಪಿನ, ಏಂ ಬಿ ಪಾಟಿಲ ಮತ್ತು ಡಿ ಎನ್ ಅಕ್ಕಿ ಅವರ ಕುರಿತು ಕವನ ಸಂಕಲನಕ್ಕೆ ಮುನ್ನುಡಿ ಬರೆದು ಪ್ರೋತ್ಸಾಹಿಸಿ ಕವನಗಳನ್ನು ಅವರು ವಿಮರ್ಶಿಸಿದ್ದರು, ಕುಷ್ಟಗಿ ಅವರ ಪತ್ನಿ ಅವರಿಗಿಂತ ಮೊದಲೇ ಬಹಳ ದಿವಸಗಳ ಹಿಂದೆಯೇ ತೀರಿಕೊಂಡರೂ ಸಹ ನೋವಲ್ಲೇ ತಮ್ಮ ಜೀವನ ಮುಂದುವರಿಸಿ ಸಾಹಿತ್ಯ ಸಾಧನೆ ಮಾಡಿದರು ಅವರು ಗಮಕವನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ ಮಹಾತ್ಮರಲ್ಲಿ ಒಬ್ಬರಾಗಿದ್ದರು ಎಂದರು.ಪ್ರಜ್ಜಲಕುಮಾರ ಬಸವರಾಜ, ಸಿದ್ದು ಮುಂಜಾನೆ ಮುಂತಾದವರು ಅವರ ಬಗ್ಗೆ ನುಡಿನಮನ ಸಲ್ಲಿಸಿದರು.