ಅಕ್ಕಮಹಾದೇವಿ ಪ್ರಥಮ ಮಹಿಳಾ ಸ್ವಾತಂತ್ರ್ಯದ ಹೋರಾಟಗಾತಿ


ಸಂಜೆವಾಣಿ ವಾರ್ತೆ
ಸಂಡೂರು:ಏ: 7: ಅಕ್ಕಮಹಾದೇವಿ ಜಗತ್ತಿನ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ಶ್ರೇಷ್ಠವಚನಕಾರ್ತಿ, 12ನೇ ಶತಮಾನದ ಮಹಿಳಾ ಕಣ್ಮಣಿಯಾಗಿದ್ದರು ಎಂದು ಉಪನ್ಯಾಸಕ ಬಸವರಾಜ ಬಣಕಾರ ತಿಳಿಸಿದರು.
ಅವರು ತಾಲೂಕಿನ ಯಶವಂತನಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಸ ನೀಡಿ ಮಾತನಾಡಿ ರಾಜಕುಮಾರಿಯಾಗಿ ಸಿಂಹಾಸನವನ್ನು ತಿರಸ್ಕರಿಸಿ ಕೌಶಿಕ ಮಹಾರಾಜ ರಾಜಸ್ವನ್ನು ಬಿಟ್ಟು ವೀರ ವಿರಾಗಿಣಿಯಾದಳು, ಕಾರಣ ಲಿಂಗಪೂಜೆ, ದಾಸೋಹ ಮತ್ತು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿದಳು, ಬಾಲ್ಯದಲ್ಲಿಯೇ ಗುರುಗಳಿಂದ ಲಿಂಗದೀಕ್ಷೆ ಪಡೆದ ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನನೆ ನನ್ನ ಗಂಡ ಎಂದು ಅತನ ಒಲುಮೆಗಾಗಿ ಬದಕನ್ನು ಅರ್ಪಿಸಿದಳು, ಬಾಹ್ಯಸೌಂದರ್ಯದ ಜೊತೆಯಲ್ಲಿ ಅಂತರಂಗದ ಸೌಂದರ್ಯ ಮಹಾದೇವಿಯನ್ನು ಅಕ್ಕಮಹಾದೇವಿಯನ್ನಾಗಿಸಿತು, ಕಲ್ಯಾಣಕ್ಕೆ ಅಗಮಿಸಿದ ಸಂದರ್ಭದಲ್ಲಿ ಶೂನ್ಯಪೀಠಾಧ್ಯಕ್ಷರಾದ ಅಲ್ಲಮಪ್ರಭುಗಳು ಪರೀಕ್ಷೆ ಮಾಡುವ ಮೂಲಕ ಅಕ್ಕನ ನಿಜವಾದ ಧಾರ್ಮಿಕ ಶಕ್ತಿಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದರು, ಅ ಸಂದರ್ಭದಲ್ಲಿ ಎಲ್ಲಾ ಶರಣ, ಶರಣೆಯರು ಕೇವಲ ಮಹಾದೇವಿಯಲ್ಲ, ಅಕ್ಕಮಹಾದೇವಿ, ಎಲ್ಲರಿಗೂ ಅಕ್ಕ ಎಂದರೆÀ, ಗುರುವಿನ ಅಪಾರ ಭಕ್ತಿಯ ಹೊಂದಿದ ಅಕ್ಕಮಹಾದೇವಿ ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ, ಭವ ಬಂಧನವ ಬಿಡಿಸಿ ಪರಮ ಸುಖವ ತೋರಿದ ಗುರುವೆ, ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ, ಚನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ ಎಂದು ಶಿವನನ್ನು ಹೊಲಿಸಿಕೊಳ್ಳಲು ಗುರು ಮುಖ್ಯ ಎಂಬುದನ್ನು ಸಾರಿದಳು, ರಾಜ್ಯ ತ್ಯಾಗಮಾಡಿ ದಿಗಂಬರವೇ ದಿವ್ಯಾಂಬರವಾದ ಮಹಾದೇವಿ ಕೇಶರಾಶಿಯೇ ವೇಷಭೂಷಣವಾಗಿ, ವಿಭೂತಿಯೇ ಅರಿಷಿಣ, ರುದ್ರಾಕ್ಷಿಯೇ ಮೈದೊಡುಗೆಯಾಧ ಮಹಾದೇವಿ, ಸಂಸಾರವೆಂಬುದು ಹಗೆಯಯ್ಯ ಎನ್ನುವ ಮೂಲಕ ಅನುಭವಮಂಟಪಕ್ಕೆ ಬಂದಳು, ಅಲ್ಲಿಂದ ಕದಳಿಗೆ ಕಾಡಿನಲ್ಲಿ ಸಾಗಿದ ಅಕ್ಕಮಹಾದೇವಿ ಹಸಿವಾದಡೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು ಎನ್ನುವ ಮೂಲಕ ಯಾರ ಅಂಗಿಗೂ ಸಿಲುಕದೇ ಹರನೇ ಗಂಡನಾಗಬೇಕೆಂಬ ಗಟ್ಟಿ ನಿರ್ಧಾರದಿಂದ ಸಾಗಿದವಳು ಅಕ್ಕಮಹಾದೇವಿ, ಅವಳ ಧೈರ್ಯ ಇಂದಿನ ಮಹಿಳೆರಿಗೆ ದಾರಿ ದೀಪವಾಗಬೇಕು ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಅಶೀರ್ವಚನ ನೀಡಿ ಮಾತನಾಡಿ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ, 12ನೇ ಶತಮಾನದ ಶರಣರು ತಮ್ಮ ಜೀವಿತಾವಧಿಯಲ್ಲಿ ಸಾಧಿಸಿದ ಸಾಧನೆ ಇಂದಿಗೂ ಸಹ ನಿತ್ಯ ಸತ್ಯವಾದುದು, ಪ್ರತಿಯೊಬ್ಬರೂ ಸಹ ಶರಣರ ಮಾರ್ಗದಲ್ಲಿ ಸಾಗಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಅರಿವೇ ಗುರು, ಲಿಂಗಪತಿ ಎನ್ನುವ ಭಾವವನ್ನು ಅಕ್ಕಮಹಾದೇವಿ ಹೊಂದಿ ಇಡೀ ಮಹಿಳಾ ರಂಗಕ್ಕೆ ಕೀರಿಟ ಪ್ರಾಯರು ಎಂದರು, ಅದ್ದರಿಂದ ಸಂಸ್ಕಾರ ಕಲಿತು ಉತ್ತಮ ಬದುಕು ಸಾಗಿಸಲು ಶರಣೆ ಅಕ್ಕಮಹಾದೇವಿ ದಾರಿ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿದ ಮಾಲತಿ ಸತೀಶ್ ಚಿತ್ರಿಕಿಯವರು ಭಾಗವಹಿಸಿದರು, ಮಾತನಾಡಿದರು, ಅಧ್ಯಕ್ಷೆ ಚಿತ್ರಿಕಿ ಸುಮಂಗಲಮ್ಮ, ಉಪಾಧ್ಯಕ್ಷರು ನಾಗರತ್ನಮ್ಮ ವೀರಣ್ಣ ಪಲ್ಲೇದ್ ಅಂಕಮನಾಳ್, ಅನಿಸಿಕೆ ವ್ಯಕ್ತಪಡಿಸಿದರು, ಸಮಾರಂಭದಲ್ಲಿ ದೀಪಾ ಗಿರೀಶ್ ಸ್ವಾಗತಿಸಿದರು, ದೀಪಾ ಸತೀಶ್ ಪಲ್ಲೇದ ನಿರೂಪಿಸಿದರು, ಕಲ್ಪನಾ, ಸೌಜನ್ಯ, ಸುಮತಿ ಪ್ರಾರ್ಥಿಸಿದರು, ಶೋಭಾ ಪಿ.ಶಿವಕುಮಾರ ವಂದಿಸಿದರು, ಅಕ್ಕನ ಬಳಗದ ಸದಸ್ಯರಾದ ಚೆನ್ನಮ್ಮ, ಕಲ್ಪನಾ ಪಿ., ಸೌಜನ್ಯ, ಜಯಮ್ಮ. ಗಂಗಮ್ಮ, ನಿರ್ಮಲ, ಶಿವಮ್ಮ, ಸಿಂಚನ.ಪಿ. ಲಕ್ಷ್ಮೀ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.