ಅಕ್ಕಮಹಾದೇವಿ ತತ್ವ, ಸಿದ್ಧಾಂತ, ದಿಟ್ಟತನ ಮಹಿಳೆಯರಿಗೆ ಮಾದರಿ: ಡಾ. ಮೀನಾಕ್ಷಿ ಬಾಳಿ

ಕಲಬುರಗಿ:ಫೆ.12:ಅಕ್ಕಮಹಾದೇವಿ ತತ್ವ, ಸಿದ್ಧಾಂತ, ದಿಟ್ಟತನವನ್ನು ಇಂದಿನ ಮಹಿಳೆಯರು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಅಕ್ಕ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಂಡ ಸರಣಿ ಉಪವಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿ ಪ್ರಭುತ್ವವನ್ನು ಸಾಮಾಜಿಕ ಅವ್ಯವಸ್ಥೆಯನ್ನು ದಿಕ್ಕರಿಸಿದಂತಹ ಮಹಾ ಮಹಿಳೆ. ಆ ನಿಟ್ಟಿನಲ್ಲಿ ಅಕ್ಕ ಮಹದೇವಿ ತತ್ವ ಸಿದ್ಧಾಂತ ದಿಟ್ಟತನ ಇಂದಿನ ಮಹಿಳೆಯರು ಮೈ ಗೂಡಿಸಿಕೊಳ್ಳಬೇಕೆಂದರು.
ಅಕ್ಕನ ತನ್ನದೇ ಆಸ್ಮಿತೆಯಿಂದ ಇಡೀ ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿದಳು. ಅದರ ಜೊತೆಗೆ ಜೀವಪರ ಜನಪರ ಚಿಂತನೆಗಳುಳ್ಳ ವೃತ್ತಿತ್ವವನ್ನು ಹೊಂದಿರುವನ್ನು ತನಗೆ ನಿಜವಾದ ಗಂಡ ಎಂದು ಕೌಶಿಕನನ್ನು ಧಿಕ್ಕರಿಸಿ ಮುನ್ನಡೆದ ದಿಟ್ಟ ಮಹಿಳೆ ಎಂದು ಹೇಳಿದ ಅವರು, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇತ್ತಿಚಿಗೆ ಪೆÇ್ರ. ಎಚ್.ಟಿ. ಪೆÇೀತೆಯವರ ನೇತೃತ್ವದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಲಿಂಗಯ್ಯನವರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮಾತನಾಡಿ, 70ರ ದಶಕರದಲ್ಲಿ ಕಾವ್ಯದ ಆಶೆಯನ್ನು ಕುರಿತು ತಮ್ಮ ಕಾವ್ಯ ಹೊಲೆಮಾದಿಗರ ಹಾಡು ಕೃತಿಯಲ್ಲಿ ತಳ ಸಮಾಜಕ್ಕೆ ಆಗುತ್ತಿರುವ ಅನ್ಯಾಯ, ಶೋಷಣೆ, ಅನುಭವಿಸುತ್ತಿರುವ ನೋವನ್ನು ತಮ್ಮ ಕಾವ್ಯದಲ್ಲಿ ವ್ಯಕ್ತಪಡಿಸಿದ್ದಾರೆ. ಇಂದಿನ ಸಮಕಾಲೀನ ಜೀವನಕೂ ಮತ್ತು ಸಿದ್ದಲಿಂಗಯ್ಯನವರ ಜೀವನಕ್ಕೂ ಆದ ಬದಲಾವಣೆಯನ್ನು ವಿವರವಾಗಿ ಹೇಳಿದ್ದಾರೆ ಎಂದರು.
70ರ ದಶಕದಲ್ಲಿ ದಲಿತ ಚಳುವಳಿ ಹುಟ್ಟುವುದಕ್ಕೆ ಬಿ. ಬಸಲಿಂಗಪ್ಪನವರ ನೇತೃತ್ವದ ನಡೆದ ಬೂಸಾ ಚಳವಳಿ ಕರ್ನಾಟಕದ ತುಂಬಾ ಹೊಸ ಸಂಚಲನ ಮೂಡಿಸಿತು. ನಂತರ ಕರ್ನಾಟಕದಲ್ಲಿ 1973ರಲ್ಲಿ ದಲಿತ ಸಂಘರ್ಷ ಸಮಿತಿಯ ಹುಟ್ಟಿಕೊಂಡಿತು. ಶೋಷಿತರ ಪರವಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಿಣಿಕವಾಗಿ ದಲಿತರು ಯಾವ ರೀತಿಯಾಗಿ ಅವಕಾಶ ವಂಚತರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾವ್ಯ ಪರಿಭಾಷೆಯನ್ನು ಬದಲಾಯಿಸಿದ ಅದ್ಬುತ ಬರಹಗಾರ ಡಾ. ಸಿದ್ದಲಿಂಗಯ್ಯನವರ ಶೋಷಿತ ವರ್ಗದ ನೈಜ ಘಟನಾವೆಳಿಯನ್ನು ವಾಸ್ತವಿಕ ನೆಲೆಯಲ್ಲಿ ಕಟ್ಟಿಕೊಟ್ಟ ಹಿರಿಯ ಕವಿಯ ಕುರಿತು ಆರಂಭಿಕ ಸರಣಿ ಆರಂಬಿಸುತ್ತಿರುವುದು ಸ್ತುತ್ಯರ್ಹ. ಭಾಷೆ ಆಳುವ ವರ್ಗದ ಉಪಕರಣವಾಗಿ ಉಪಯೋಗಗೊಳ್ಳತ್ತಿರುತ್ತದೆ. ಅಂತಹ ಶಿಷ್ಟ ಭಾಷೆಯ ಒಳಗಡೆ ಇರುವ ಅನುಭಾವಿಕ ಭಾಷೆಯನ್ನು ಬಳಸಿ ಕಾವ್ಯ ರಚಿಸಿದ ಕವಿ ಸಿದ್ಧಲಿಂಗಯ್ಯ ಎಂದು ಹೇಳಿದ ಅವರು, ಭಾರತೀಯ ಸಮಾಜ ಛಿದ್ರಗೊಳ್ಳುತ್ತಿರುವ ಈ ಸಂದಿಗ್ದ ಪರಸ್ಥಿತಿಯಲ್ಲಿ ನಾವಿದ್ಧೇವೆ. ವೈದಿಕ ವ್ಯವಸ್ಥೆ ದುಡಿಯುವ ವರ್ಗವನ್ನು ನಿರಂತರವಾಗಿ ಶೋಷಣೆಗೈಯ್ಯುತ್ತಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ಬಸವರಾಜ್ ಎಲ್. ಜಾನೆಯವರು ಮಾತನಾಡಿ, ಕಲಾವಿದರು ದೃಶ್ಯ ಭಾಷೆಯ ಮೂಲಕ ಮಹತ್ವದ ಸಂದೇಶವನ್ನು ತಿಳಿಸುವಂತಹ ಕಲಾ ವಿದರು ಕಲೆ, ಶಿಲ್ಪಗಳ ಮೂಲಕ ಸಾಧನೆಯ ಶಿಖರದತ್ತ ಸಾಗಿದಂತವನು ಗಾನು ಎಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕತಿ ವಾಸ್ತುಶಿಲ್ಪ ಉಳಿವಿಗಾಗಿ ಅಗಲಿರುಳೂ ಶ್ರಮಿಸಿದ್ದೇನೆ. ಎಂದರು ತಂದೆಯ ಆಶಯ ಮತ್ತು ಆಸಕ್ತಿಯ ಕಾರಣಕ್ಕಾಗಿ ಕಲಾವಿದನಾದೆ ಎಂದು ಹೇಳಿ, ಜೀವನದಲ್ಲಿ ಆದ ನೈಜ ಘಟನೆಯನ್ನು ಮೆಲುಕು ಹಾಕಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡಿ, ವಿದ್ಯಾರ್ಥಿಗಳ ಕುರಿತು ಸಾಧನೆ ಮಾಡಬೇಕಾದರೆ ಸತತ ಅಧ್ಯಯನ ಮಾಡಬೇಕು. ತಪ್ಪಸ್ಸು ಮಾಡಬೇಕು ಅಂದಾಗ ಏನಾದರೂ ಸಾಧಿಸಲಿಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರಲ್ಲದೇ ಹಾಗೆಯೇ ಸಿದ್ದಲಿಂಗಯ್ಯನವರ ಹೋರಾಟದ ಬದಕಿನ ಕುರಿತು ವಿವರಿಸಿದರು.