ಅಕ್ಕಮಹಾದೇವಿ ಜಯಂತ್ಯೋತ್ಸವ

ವಿಜಯಪುರ:ಏ.29:ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ದೇವಾಲಯದಲ್ಲಿ ಅಕ್ಕನ ಬಳಗದ ವತಿಯಿಂದ ಮಹಾ ಶಿವಶರಣೆ ವೈರಾಗಿಣಿ ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿಯ ಜಯಂತ್ಯುತ್ಸವವನ್ನು ಮತ್ತು ಅಕ್ಕನ ಬಳಗದ 72ನೇ ವಾರ್ಷಿಕೋತ್ಸವ ಸಮಾರಂಭವನ್ನು ಎಲ್ಲ ಬಸವಾದಿ ಶರಣರ ಆಶಯದಂತೆ ಅತ್ಯಂತ ಸರಳ ಮತ್ತು ಸುಂದರವಾಗಿ ಆಚರಿಸಲಾಯಿತು.
ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
1964ರಲ್ಲಿ ಅಕ್ಕಮಹಾದೇವಿ ಮೂರ್ತಿಯ ದೇಣಿಗೆಯನ್ನು ನೀಡಿದಂತಹ ನಾವದಗಿ ಪರಿವಾರದ ಪರವಾಗಿ ಶುಭದಾ ಅನೀಲ ನಾವದಗಿ ಅವರನ್ನು ಮತ್ತು ಮುಖ್ಯ ಅತಿಥಿಗಳು ಹಾಗೂ ವಿಶೇಷ ಆಮಂತ್ರಿತರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತಾ ಕರಡಿ ವಹಿಸಿದ್ದರು.
ದಂತ ವೈದ್ಯರು ಹಾಗೂ ಸಾಹಿತಿಗಳು ರೇಖಾ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವ್ಹಿ. ಸಿ. ನಾಗಠಾಣ ಅತಿಥಿಗಳಾಗಿ ಆಗಮಿಸಿದ್ದರು. ಬಾಬುರಾವ ಮಹಾರಾಜ ಹೊನವಾಡ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು.
ಅಕ್ಕನ ಬಳಗ ಅಧ್ಯಕ್ಷೆ ಶಕುಂತಲಾ ಮೋಸಲಗಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.