ಕಲಬುರಗಿ: ಎ.3:ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ನಗರದ ಬಿದ್ದಾಪುರ ಕಾಲನಿಯಲ್ಲಿರುವ ಅಕ್ಕಮಹಾದೇವಿ ಆಶ್ರಮದಲ್ಲಿ ಪೂಜ್ಯ ಪ್ರಭುಶ್ರೀ ತಾಯಿ ಅವರ ನೇತೃತ್ವದಲ್ಲಿ ದಿ.3ರಿಂದ 7ರವರೆಗೆ ಐದು ದಿನಗಳ ಕಾಲ ದಿನಾಲು ಸಾ.6ಗಂಟೆಗೆ ವಿಶೇಷ ಉಪನ್ಯಾಸಗಳು, ಚಿಂತನೆಗಳು, ಶರಣ ಸಂಗಮ ಮತ್ತು ಸಂಗೀತ ಕಾರ್ಯಕ್ರಮದ ಜರುಗಲಿದೆ ಎಂದು ಆಶ್ರಮದ ವತಿಯಿಂದ ಉಪನ್ಯಾಸಕ ಎಚ್.ಬಿ.ಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ವಿವರ ನೀಡಿದ ಅವರು, ದಿ.3ರ ಸೋಮವಾರ ಜರುಗಲಿರುವ ಕಾರ್ಯಕ್ರಮದಲ್ಲಿ ಶರಣ ಚಿಂತಕ, ಉಪನ್ಯಾಸಕ ಎಚ್.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶರಣ ಚಿಂತಕರಾದ ಬಸ್ಸುಗೌಡ ಪಾಟೀಲ ಹಾವನೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಓಂಕಾರೇಶ್ವರ ಘೋಷಿಮಠ, ರಾಜಶೇಖರ ಯಂಕಂಚಿ, ಜಗನಾಥ ರಾಚೋಟಿ, ಶರಣಗೌಡ ಪಾಟೀಲ ಪಾಳಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದಿ.4ರ ಮಂಗಳವಾರ ಜರುಗಲಿರುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಡಾ.ನೀಲಾಂಬಿಕಾ ಶೇರಿಕಾರ, ಪ್ರಾಂಶುಪಾಲೆ ಜೇಬಾ ಪರ್ವಿನ್, ಉಪನ್ಯಾಸಕಿ ಖನೀಜಾ ಫಾತಿಮಾ ಭಾಗವಹಿಸಿಲಿದ್ದಾರೆ. ದಿ.5ರ ಬುಧವಾರದಂದು ಡಾ.ವಿಲಾಸವತಿ ಎಸ್.ಖೂಬಾ, ಡಾ.ನಿವೇದಿತಾ ಎಸ್.ಸ್ವಾಮಿ ಮುಖ್ಯ ಅತಿಥಿಗಳಾಗಿದ್ದು, ವಿವಿಧ ಕ್ಷೇತ್ರದ ಮಹಿಳಾ ಸಾಧಕರಾದ ಭಾಗ್ಯಲಕ್ಷ್ಮೀ ಎಂ. ಮತ್ತು ಪೂಜಾ ಎಂ.ಏರಿ ಅವರಿಗೆ ವಿಶೇಷವಾಗಿ ಗೌರವಿಸಲಾಗುತ್ತದೆ.
ಅಕ್ಕಮಹಾದೇವಿ ಜಯಂತಿ ದಿ.6ರ ಗುರುವಾರದಂದು ತೊಟ್ಟಿಲು ಕಾರ್ಯಕ್ರಮ ಜರುಗಲಿದೆ. ಸಾದ್ವಿ ಮಧುಬಾಲಾ, ಸಾದ್ವಾ ವಾಣಿಶ್ರೀ, ಡಾ.ಭಾರತಿ ಎಸ್.ರೇಷ್ಮಿ, ಜಯಶ್ರೀ ಚಟ್ನಳ್ಳಿ ಮುಖ್ಯ ಅತಿಥಿಗಳಾಗಿದ್ದಾರೆ. ದಿ.7ರ ಶುಕ್ರವಾರ ಸಮಾರೋಪ ಜರುಗಲಿದೆ. ಪೂಜ್ಯ ಸಿದ್ಧಮಾಂಬೆ ತಾಯಿ ಮತ್ತು ಜಯಶ್ರೀ ಮಾತಾ ದಂಡೋತಿ ದಿವ್ಯ ಸಾನಿಧ್ಯ, ಪೂಜ್ಯ ಪ್ರಭುಶ್ರೀ ತಾಯಿ ನೇತೃತ್ವದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಶಂಕರಲಿಂಗ ಭಂಕಲಗಿ, ಹಣಮಂತಯ್ಯ ನಿಂಗಯ್ಯಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಠಲ ಮಡಿವಾಳ, ಅಶೋಕ ಮಡಿವಾಳ, ಸಿದ್ದು ಮಡಿವಾಳ, ಧರ್ಮಣ್ಣ ಮಡಿವಾಳ, ಸಾಯಬಣ್ಣ ಹೋಳ್ಕರ್ ಅವರಿಗೆ ವಿಶೇಷವಾಗಿ ಗೌರವಿಸಿ, ಸನ್ಮಾನಿಸಲಾಗುತ್ತದೆ. ಭೀಮಾಶಂಕರ ಬಾಬಾ ನಿರೂಪಣೆ, ಮಲ್ಲಿಕಾರ್ಜುನ ರೋಣದ ವಂದನಾರ್ಪಣೆ ಮಾಡುವರು. ವೀರಭದ್ರ ಕುಂಬಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಲು ಕೋರಲಾಗಿದೆ.