ಅಕ್ಕಪಕ್ಕದ ಜಿಲ್ಲೆಗೆ ಲಸಿಕೆಗಾಗಿ ಮುಗಿಬಿದ್ದ ಜನ

ಬೆಂಗಳೂರು,ಮೇ.೧೪-ನಗರದಲ್ಲಿ ಲಸಿಕೆಗೆ ಅಭಾವ ಉಂಟಾಗಿರುವ ಹಿನ್ನಲೆಯಲ್ಲಿ ನಗರದಿಂದ ಸಾವಿರಾರು ಮಂದಿ ಸುತ್ತಮುತ್ತಲಿನ ಚಿಕ್ಕಬಳ್ಳಾಪುರ ತುಮಕೂರು, ಕೋಲಾರ ಹಾಗೂ ಗ್ರಾಮಾಂತರ ಜಿಲ್ಲೆಯ ನೆಲಮಂಗಲಕ್ಕೆ ಕೊರೊನಾ ಲಸಿಕೆ ಪಡೆಯಲು ಹೋಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಲಸಿಕೆಗೆ ಮೊದಲು ನೊಂದಣಿ ಮಾಡಿಕೊಂಡಿರಬೇಕು. ಅವರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗುತ್ತದೆ. ಸ್ವಯಂಪ್ರೇರಿತರಾಗಿ ಲಸಿಕಾಕರಣ ಕೇಂದ್ರಕ್ಕೆ ಬಂದವರಿಗೆ ವ್ಯಾಕ್ಸಿನೇಷನ್ ಕೊಡಲ್ಲ ಇದರಿಂದ ಅನುಕೂಲವಾಗಿದೆ ಇದಲ್ಲದೇ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಹತ್ತಿರದ ಜಿಲ್ಲೆಗಳಿಗೆ ಬೆಂಗಳೂರಿಗರು ಲಗ್ಗೆ ಇಡುತ್ತಿದ್ದಾರೆ.
ಕೋವಿನ್ ಆ?ಯಪ್‌ನಲ್ಲಿ ಎಲ್ಲಿ ಲಸಿಕೆ ಲಭ್ಯತೆ ಇರುತ್ತದೆಯೋ ಅಲ್ಲಿ ಲಸಿಕೆ ಪಡೆಯಲು ನೊಂದಣಿ ಮಾಡಿಕೊಳ್ಳಬಹುದು. ಹೀಗಾಗಿ ಬೆಂಗಳೂರಿಗರು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹಾಗಾಗಿ ಬೆಳಗ್ಗಿನಿಂದಲೂ ನೂರಾರು ಮಂದಿ ಆಗಮಿಸಿ ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ.
ಸ್ಥಳೀಯರ ಆಕ್ರೋಶ:
ಬೆಂಗಳೂರಿಗರೇ ಬಂದು ಲಸಿಕೆ ಪಡೆದುಕೊಂಡು ಹೋದರೆ ನಮಗೆ ಲಸಿಕೆ ಸಿಗಲ್ಲ. ನೀವು ಯಾಕೆ ಇಲ್ಲಿ ಬರುವಿರಾ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿ, ಅಧಿಕಾರಿಗಳ ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿಂದ ಬಂದವರು ಇಲ್ಲಿ ಏಕೆ ಲಸಿಕೆ ಪಡೆದುಕೊಳ್ಳಬೇಕು ಅಲ್ಲಿಂದ ಬಂದವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಾ ಮುಂದು ತಾ ಮುಂದು ಎಂದು ಮುಗಿಬಿಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ವ್ಯಾಕ್ಸಿನ್ ಪಡೆಯಲು ಬರುವವರು ಕೊರೊನಾ ಸೋಂಕು ಹರಡಿದರೆ ಯಾರು ಹೊಣೆ? ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸದೇ ಜಿಲ್ಲೆಗೆ ಪ್ರವೇಶ ಕೊಡುತ್ತಿದ್ದೀರಿ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಮತ್ತೊಂದೆಡೆ ಲಾಕ್ ಡೌನ್ ಅಂತರ್ ಜಿಲ್ಲಾ ಒಡಾಟಕ್ಕೆ ನಿರ್ಬಂಧವಿದ್ದರೂ ಸ್ವಂತ ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಲಸಿಕೆಗಳನ್ನು ನೀಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸುತ್ತಿದೆ.
ಲಸಿಕೆ ತೆಗೆದುಕೊಳ್ಳಲು ಯಾರಾದರೂ ಎಲ್ಲಿಂದಲಾದರೂ ಬಂದು ಹೋಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಅಧಿಕಾರಿಗಳ ಸಮಾಧಾನ:
ಬೆಂಗಳೂರಿನಿಂದ ಬರುವವರನ್ನು ದೈಹಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ನಿಯಮಗಳನ್ನು ಪಾಲಿಸುವಂತೆ ಹೇಳಬಹುದು ಅಷ್ಟೇ ನಮ್ಮಿಂದ ಸಾದ್ಯವಾಗುವ ಕೆಲಸ ಎಂದು ಆಕ್ರೋಶ ಗೊಂಡ ಸ್ಥಳೀಯರನ್ನು ಅಧಿಕಾರಿಗಳು ಸಮಾಧಾನಪಡಿಸುತ್ತಿದ್ದಾರೆ.
ನೇಲಮಂಗಲ ಸರ್ಕಾರಿ ಆಸ್ಪತ್ರೆಯ ಹೊರಗೆ ಬೆಂಗಳೂರಿನ ಸಾಫ್ಟ್‌ವೇರ್ ವೃತ್ತಿಪರರೊಂದಿಗೆ ವಾಗ್ವಾದಕ್ಕಿಳಿದ ಯುವತಿಯ ಉದಾಹರಣೆಯನ್ನು ಅಧಿಕಾರಿ ಉಲ್ಲೇಖಿಸಿದ್ದಾರೆ. “ನಗರದಿಂದ ಹೆಚ್ಚುತ್ತಿರುವ ಲಸಿಕೆ ಕೊರತೆಯಿಂದಾಗಿ ತನ್ನ ತಾಯಿಗೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳೆ ಹೇಳಿದರು