ಅಕ್ಕನ ಆದರ್ಶ ಎಂದೆಂದಿಗೂ ಮಾದರಿ : ಯೋಗೇಶ್ವರಿ ಮಾತಾಜಿ

ವಿಜಯಪುರ,ಎ.11: ಮಹಾದೇವಿಯಕ್ಕನ ವಚನಗಳಲ್ಲಿ ಬುದ್ಧಿಗಿಂತ ಭಾವಕ್ಕೆ ಪ್ರಾಧಾನ್ಯತೆಯಿದೆ; ಮಾತಿಗಿಂತ ಕ್ರಿಯೆಗೆ ಮಹತ್ವವಿದೆ. ಅಧಿಕಾರಕ್ಕಿಂತ ಸನ್ನಡತೆ ಮುಖ್ಯವಾಗಿದೆ. ತಾನು ಹೇಳುವ ಮಾತು ಪಾಂಡಿತ್ಯದ ಪ್ರದರ್ಶನವಾಗಿರದೆ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಹೀಗೆ ಅಕ್ಕ ಒಬ್ಬ ಕವಯತ್ರಿಯಾಗಿ, ಅನುಭಾವಿಯಾಗಿ, ಜ್ಞಾನದ ಬೆಳಕಾಗಿ, ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಸಾಹಿತಿ ಅನುಪಮಾ ಪಿ. ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ ಹಮ್ಮಿಕೊಂಡ ಅಕ್ಕಮಹಾದೇವಿಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುರಣಾಪುರ ಅರೂಢಾಶ್ರಮದ ಯೋಗೇಶ್ವರಿ ಮಾತಾಜಿಯವರು ಅಕ್ಕನ ಆದರ್ಶಗಳನ್ನು ಅನುಸರಿಸುತ್ತಾ ಮಹಿಳೆಯರು ಒಗ್ಗಟ್ಟಾಗಿ ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕೆಂದು ಆಶೀರ್ವಚನ ನೀಡಿದರು.
ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಬನುದೇವಿ ಸಂಕಣ್ಣವರರವರು ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರೆಂದು ಹೇಳಿದರು.
ಬಬಲೇಶ್ವರದ ಅಕ್ಕನ ಬಳಗದ ಅಧ್ಯಕ್ಷರಾದ ನೀಲಕ್ಕಾ ಎಸ್. ಬಿರಾದಾರ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ. ಉಷಾದೇವಿ ಹಿರೇಮಠ ಉಪಸ್ಥಿತರಿದ್ದರು.
ಅಕ್ಕಮಹಾದೇವಿಯ ತೊಟ್ಟಿಲು ಕಾರ್ಯಕ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಜರುಗಿದವು.
ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಶಾರದಾ ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ವಿದ್ಯಾ ಕೋಟೆನ್ನವರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷರಾದ ಶಶಿಕಲಾ ಸ್ಥಾವರಮಠ ವಂದಿಸಿದರು.
ಭಾರತಿ ಭುಯ್ಯಾರ, ದಾಕ್ಷಾಯಿಣಿ ಹಿರೇಮಠ, ವಿದ್ಯಾವತಿ ಅಂಕಲಗಿ, ಸುವರ್ಣಾ ಕುರ್ಲೆ, ಶೈಲಶ್ರೀ ಬೀಳಗಿ, ಸುವರ್ಣಾ ತೇಲಿ, ಭಾಗ್ಯಶ್ರೀ ಸಿಂಹಾಸನಮಠ, ಅನ್ನಪೂರ್ಣ ಹಾಡೋಣ, ಜ್ಯೋತಿ ಬಾಗಲಕೋಟ, ಅನಸೂಯ ಕರಿಗೌಡರ, ವಂದನಾ ಲೋಣಿ, ನಿರ್ಮಲಾ ಸುಂಠಾಣ, ನಿಂಗಮ್ಮ ಡೊಮನಾಳ, ಸ್ವಪ್ನಾ ಅರಕೇರಿ, ನೂತನ ಬ್ಯಾಕೋಡ, ಶ್ರೀಮತಿ ಡೊಮನಾಳ, ಶೈಲಾ ಪೂರ್ಣಿಮಾ ತುಂಗಳ, ರೇಖಾ ಪಂಡಿತ, ಶಶಿಕಲಾ ಪಾಟೀಲ, ಲಕ್ಷ್ಮಿ ಕನ್ನೊಳ್ಳಿ, ಮಲ್ಲಮ್ಮ ಹೊಸಮನಿ, ನೀಲಮ್ಮ ಸಂಕಣ್ಣವರ, ಶ್ರೀ ಕೆ.ಆಯ್.ಅಂಕಲಗಿ, ಶ್ರೀ ಅವರಾದಿ, ಶ್ರೀ ಡಾ. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.