(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.24: ಗ್ಯಾರೆಂಟಿ ಸ್ಕೀಮ್ ಗಳ ಲಾಭಕ್ಕಾಗಿ ಜನತೆ ತಮ್ಮ ಬ್ಯಾಂಕಿನ ಅಕೌಂಟ್ ಗಳನ್ನು ಆಧಾರ್ ಲಿಂಕ್ ಮಾಡಲು ಮುಗಿಬಿದ್ದಿದ್ದಾರೆ.
ಈವರೆಗೆ ಕೇವಲ ಅಕೌಂಟ್ ಮಾಡಿಸಿ ಸುಮ್ಮನಾಗಿದ್ದ ಜನತೆ. ಈಗ ಗ್ಯಾರೆಂಟಿ ಸ್ಕೀಮ್ ಗಳಿಂದ, ಅಕ್ಕಿ ಹಣ, ಗೃಹಲಕ್ಷ್ಮಿ ಹಣ ತಮ್ಮ ಅಕೌಂಟ್ ಗೆ ಬಂದು ಬೀಳಬೇಕೆಂದರೆ ಆಧಾರ ಲಿಂಕ್ ಆಗಿರಲೇ ಬೇಕು. ಇಲ್ಲದಿದ್ದರೆ ತಿಂಗಳಿಗೆ ಎರೆಡರಿಂದ ಎರೆಡುವರೆ ಸಾವಿರ ರೂ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಫಲಾನುಭವಿಗಳು ತಮ್ಮ ತಮ್ಮ ಬ್ಯಾಂಕ್ ಶಾಖೆಗಳಿಗೆ ತೆರಳಿ ಆಧಾರ್ ಲಿಂಕ್ ಮಾಡಿಸಲು ಮುಗಿಬಿದ್ದಿದ್ದಾರೆ. ಇದಕ್ಕಾಗಿ ಸಾಲಾಗಿ ನಿಂತು ಗಂಟೆ ಗಟ್ಟಲೆ ಕಾಯುತ್ತಿದ್ದಾರೆ.
One attachment • Scanned by Gmail