ಅಕಾಲಿಕ ಮಳೆ – ಸೋರುವ ಕೂಡ್ಲಿಗಿ ಪೊಲೀಸ್ ಠಾಣೆಯೊಳಗೆಲ್ಲ ನೀರು.

ಕೂಡ್ಲಿಗಿ.ನ. 20  :- ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೂಡ್ಲಿಗಿ ಪೊಲೀಸ್ ಠಾಣೆ ಸಂಪೂರ್ಣ ಹಳೆಕಟ್ಟಡವಾಗಿರುವ ಪರಿಣಾಮ ಸೋರುತಿದ್ದು ಕಳೆದ ರಾತ್ರಿಯಿಂದ ಇಂದು ನಸುಕಿನವರೆಗೆ ಸಂಪೂರ್ಣ ಠಾಣೆ ಜಲಾವೃತಗೊಂಡಿತ್ತು.  ಕೂಡ್ಲಿಗಿ ಪೊಲೀಸ್ ಠಾಣೆ ಕಳೆದ ಆರೇಳು  ದಶಕದ  ಹಳೇ ಕಟ್ಟಡವಾಗಿದ್ದು ಮಳೆಬಂದರೆ ಅಲ್ಲಲ್ಲಿ ಸೋರುತ್ತಿತ್ತು ಅದಕ್ಕೆ ತೇಪೆ ಹಾಕಿ ಸಿಮೆಂಟ್ ಮಾಡಿಸಲಾಗಿತ್ತು ಆದರೆ ಮೂರ್ನಾಕು ದಿನದಿಂದ ನಿರಂತರ ಸುರಿವ ಮಳೆಗೆ ಹಳೆಕಟ್ಟಡವಾಗಿರುವ ಪೊಲೀಸ್ ಠಾಣೆಯ ಮೇಲ್ಚಾವಣಿಯಿಂದ ಮಳೆ ನೀರು ಸೋರಾಟದಿಂದ ಪಿಎಸ್ಐ ಕೊಠಡಿ ಹಾಗೂ ಸಭೆನಡೆಸುವ ಆವರಣ ಕೋಣೆಯ ತುಂಬಾ ಕಳೆದ ರಾತ್ರಿಯಿಂದ ನಸುಕಿನ ಜಾವದವರೆಗೆ ಮಳೆನೀರು ನಿಂತು ಜಲಾವೃತಗೊಂಡಿದ್ದು ಇಂದು ನಸುಕಿನ ಜಾವ ಠಾಣೆಯಲ್ಲಿ ಕಸಗುಡಿಸುವ ವ್ಯಕ್ತಿ ಸಂಪೂರ್ಣ ನೀರು ಹೊರಹಾಕುವ ಕೆಲಸ ಮಾಡಿದ್ದಾನೆ ಸಾರ್ವಜನಿಕರನ್ನು ರಕ್ಷಣೆ ಮಾಡುವ ಆರಕ್ಷಕರಿಗೆ ಹಳೇ ಕಟ್ಟಡದಿಂದ ರಕ್ಷಣೆ ಇಲ್ಲವಾಗಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ : =      ನಿರಂತರ ಮಳೆಗೆ ಸೋರುತ್ತಿರುವ       ಆರೇಳು ದಶಕದ ಹಳೇ ಕಟ್ಟಡವಿರುವ ಕೂಡ್ಲಿಗಿ ಪೊಲೀಸ್ ಠಾಣೆಯಿಂದ  ಕರ್ತವ್ಯ ನಿರ್ವಹಿಸುತ್ತಿರುವುದು ಪೊಲೀಸರಿಗೆ  ಅಪಾಯ ಜರುಗುವ ಮೊದಲೇ ಈ ಕಟ್ಟಡ ನೆಲಸಮಗೊಳಿಸಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸುವಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಬೇಕೆಂದು ಕೂಡ್ಲಿಗಿ ಸಾರ್ವಜನಿಕರ ಒತ್ತಾಯವಾಗಿದೆ.