ಅಕಾಲಿಕ ಮಳೆ, ಮನೆಗಳಿಗೆ ಹಾನಿ

ಕೊಲ್ಹಾರ:ಮೇ.21: ತಾಲೂಕಿನ ಬಳೂತಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಎರಡು ಮನೆಗಳಿಗೆ ಹಾನಿಯಾದ ಘಟನೆ ಜರುಗಿದೆ.
ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದಾಗಿ ಬಳೂತಿ ಗ್ರಾಮದ ಅಮರಪ್ಪ ಮಾಳೇದ ಹಾಗೂ ರಾಯವ್ವ ಕೋಲಕಾರ ಎಂಬುವವರ ಎರಡು ಮನೆಗಳ ಒಂದು ಭಾಗದ ಗೋಡೆ ಭಾಗಶ: ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿಯಾಗಿಲ್ಲ ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದ್ದಾರೆ.