ಅಕಾಲಿಕ ಮಳೆ: ಭಾರಿ ಬೆಳೆ ಹಾನಿ

ಬಂಕಾಪುರ, ನ23: ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಗೋವಿನಜೋಳ, ಹತ್ತಿ, ಭತ್ತ, ರಾಗಿ, ಮೆಣಸಿನಕಾಯಿ ಸೇರದಂತೆ ತರಕಾರಿ ಬೆಳೆಗಳು ನೀರು ಪಲಾಗಿದ್ದು ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಯಿತು. ಇದರಿಂದ ಕಂಗಾಲಾಗೀರುವ ರೈತರು ತೆಲೆಮೇಲೆ ಕೈ ಹೊತ್ತು ಕೂರುವಂತಾಗಿದೆ.
ಕೆಲ ರೈತರು ಮುಂಗಾರು ಬೆಳೆ ಪಡೆದುಕೊಂಡು ಹಿಂಗಾರು ಜೋಳ, ಕಡಲೆ, ಗೋದಿ, ಗೋವಿನಜೋಳ, ಕುಸುಬಿ ಸೇರಿದಂತೆ ಇತರ ಬೀಜಗಳನ್ನು ಬಿತ್ತಿದ್ದರು. ಆದರೆ , ಅಕಾಲಿಕ ಮಳೆಯಿಂದ ಹೊಲ, ಗದ್ದೆಗಳಲ್ಲಿ ನೀರು ನಿಂತು ಬೀಜ ಕೊಳೆಯುವ ಹಂತಕ್ಕೆ ತಲುಪಿರುವುದು ಅನ್ನದಾತ ಕಂಗಾಲಾಗಲು ಕಾರಣವಾಗಿದೆ.
ಇನ್ನು ಕೆಲ ರೈತರು ಮುಂಗಾರು ಬೆಳೆಯಾದ ಗೋವಿನಜೋಳ, ಸೋಯಾಬಿನ್, ಹೈಬ್ರಿಡ್ ಜೋಳ ಕಟಾವು ಮಾಡಿ ಹೊಲಗಳಲ್ಲಿ ರಾಶಿ ಹಾಕಿದ್ದ ಬಣವಿಗಳು ಈಗ ನೀರು ಪಲಾಗಿದ್ದು, ಬಿಡಿಸಲು ಬಂದ ಹತ್ತಿ ಬೆಳೆಯಿಂದಾಗಿ ಮಣ್ಣು ಪಲಾಗಿದೆ. ಬಂಕಾಪುರ ಹೋಬಳಿ ಬೆಳೆ ಹಾನಿ ಪ್ರದೇಶಕ್ಕೆ ಕಂದಾಯ ನೀರಿಕ್ಷಕ ಆರ್. ಎಂ. ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಶಿ ಹೊನ್ನಣ್ಣವರ ಮಾತನಾಡಿ, ಸತತ ಮೂರು ವರ್ಷಗಳಿಂದ ಮಳೆ ಪ್ರವಾಹಕ್ಕೆ ಬೆಳೆ ಕಳೆದುಕೊಳ್ಳುತ್ತಿರುವ ರೈತ ಸಮೂಹ ಸರಿಯಾದ ಪರಿಹಾರ ಸಿಗದೇ ಕಂಗಾಲಾಗಿದ್ದ. ಇಂತಹ ಸಂದೀಗ್ದ ಪರಿಸ್ಥಿತಿಯಲ್ಲಿ ಮತ್ತೆ ನೆರೆ ಹಾವಳಿಗೆ ಸಿಲುಕಿದ ರೈತನಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ . ಸರ್ಕಾರ ಶೀಘ್ರ ರೈತರ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.