ಅಕಾಲಿಕ ಮಳೆ ಬೆಳೆನಷ್ಟ ಪರಿಹಾರಕ್ಕೆ ಮನವಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಡಿ 03 : ರಾಜ್ಯದಾದ್ಯಂತ ಅಕಾಲಿಕ ಮಳೆ ಯಿಂದಾಗಿ ಉಂಟಾದ ಬೆಳೆ ನಷ್ಟ ಪ್ರಮಾಣದ ಹಿನ್ನೆಲೆಯಲ್ಲಿ ಆಯಾ ರೈತರ ಖಾತೆಗೆ ವೈಜ್ಞಾನಿಕ ಮಾನದಂಡ ಅನುಸರಿಸಿ ಪರಿಹಾರ ವಿತರಿಸಬೇಕು, ಬೆಳೆ ನಷ್ಟ ಅನುಭವಿಸಿದ ರೈತರ ಬ್ಯಾಂಕ್ ನಲ್ಲಿರುವ ಬೆಳೆ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ತಾಲೂಕು ಆಡಳಿತದ ಮೂಲಕ ಅಖಿಲ ಭಾರತ ಕಿಸಾನ್ ಮಹಾಸಭಾ ಸದಸ್ಯರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಎಂಹಾಲಯ್ಯ,ಟಿ.ರಾಜಪ್ಪ ಸೇರಿದಂತೆ ಅನೇಕ ರಿದ್ದರು