ಅಕಾಲಿಕ ಮಳೆ: ಅಪಾರ ಬೆಳೆಹಾನಿ

ಲಕ್ಷ್ಮೇಶ್ವರ,ನ26: ಅಕಾಲಿಕ ಮಳೆ ನಿಂತರು ಜಮೀನುಗಳಲ್ಲಿನ ಬೆಳೆಹಾನಿ ನಿಲ್ಲುತ್ತಿಲ್ಲ ಈಗ ಜಮೀನುಗಳಲ್ಲಿನ ಬೇರೆ ಬೇರೆ ಬೆಳೆಗಳು ಮಳೆ ನಿಂತ ಮೇಲೂ ಹಾಳಾಗುತ್ತಿದ್ದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.
ಎಣ್ಣೆ ಬೀಜಗಳಲ್ಲಿ ಪ್ರಮುಖವಾದ ಕುಸುಬಿ ಬೆಳೆಯೂ ಬೆಳೆ ಹಾನಿಯ ಸರದಿಯಲ್ಲಿ ಬರುತ್ತಿದ್ದು, ಆದರೆ ಸರ್ಕಾರ ಈ ಬೆಳೆಗೆ ಪೆÇ್ರೀತ್ಸಾಹ ನೀಡುತ್ತಿದ್ದರೂ ಹಾನಿಯ ಲೆಕ್ಕದಲ್ಲಿ ಪರಿಗಣಿಸಿರುವುದರಿಂದ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರೈತರಾದ ರಾಮಣ್ಣ ಕೊಂಡಿಕೊಪ್ಪ ಉರ್ಫ್ ಪಾಟೀಲ್, ವೆಂಕನಗೌಡ ಪಾಟೀಲ್, ಮಲ್ಲಿಕಾರ್ಜುನ ದಾನಿ, ನಾಗಪ್ಪ ರೆಡ್ಡಿ ಸೇರಿದಂತೆ ಅನೇಕ ರೈತರ ಜಮೀನುಗಳಲ್ಲಿ ಬೆಳೆದುನಿಂತ ಕುಸುಬಿ ಸಂಪೂರ್ಣ ಹಾಳಾಗಿದೆ.
ರಾಮಣ್ಣ ಪಾಟೀಲ್ ಅವರಿಗೆ ಸೇರಿದ 11 ಎಕರೆ ಜಮೀನಿನಲ್ಲಿ ಕುಸುಬಿ ಸಿಡಿ ಹಾದು ಒಣಗುತ್ತಿದೆ ಇದು ರೈತರಿಗೆ ಹಾನಿ ಉಂಟು ಮಾಡಿದ್ದರು ಸರ್ಕಾರ ಮಾತ್ರ ಎಣ್ಣೆ ಬೆಳೆಗಳ ಬಗ್ಗೆ ಮಾರ್ಗದರ್ಶಿ ಸೂಚನೆಗಳನ್ನು ನೀಡದಿರುವುದು ರೈತರಿಗೆ ಸರ್ಕಾರದ ಮೇಲೆ ವಿಶ್ವಾಸವೇ ಇಲ್ಲದಂತಾಗಿದೆ. ರೈತರು ಯಾವುದೇ ಬೆಳೆ ಬೆಳೆದಿರಲಿ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿದ್ದು ಎಲ್ಲಾ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ವೆಂಕನಗೌಡ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.