ಅಕಾಲಿಕ ಮಳೆಗೆ ರೈತರ ಬೆಳೆಹಾನಿ ; ಬೆಳೆಸಾಲ ಮನ್ನಾ ಮಾಡಲು ಜೆಡಿಎಸ್‍ಆಗ್ರಹ

ಸಂಜೆವಾಣಿ ವಾರ್ತೆ
ಕುರುಗೋಡು.ಡಿ.05: ಇತ್ತೀಚಿಗೆ ಸುರಿದ ಬಾರೀಮಳೆಯಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಮೆಣಸಿನಕಾಯಿ, ಹತ್ತಿ, ಭತ್ತ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಮನನೊಂದು ಆತ್ಮಹತ್ಯೆಗೆ ಗುರಿಯಾಗಿದ್ದಾರೆ, ಆದ್ದರಿಂದ ಸರ್ಕಾರ ಇಂಥಹ ಪರಿಸ್ಥಿತಿಯನ್ನು ಗಂಭಿರವಾಗಿ ಪರಿಗಣಿಸಿ ಪ್ರಸಕ್ತಸಾಲಿನಲ್ಲಿ ಪಡೆದ ಬೆಳೆಸಾಲವನ್ನು ಮನ್ನಾಮಾಡಬೇಕೆಂದು  ಜೆಡಿಎಸ್‍ಪಕ್ಷದ ರೈತವಿಭಾಗದ ಜಿಲ್ಲಾ ಮುಖಂಡ ಬೈಲೂರು ಲಕ್ಷಿಕಾಂತರೆಡ್ಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ
ಅವರು ಶನಿವಾರ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಕರೆಯಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು, ಮಾತ್ರವಲ್ಲದೆ ನಮ್ಮಾಳುವ ಸರ್ಕಾರಗಳು ರೈತರಿಗಾಗಿ ಜಾರಿಗೊಳಿಸಿದ ಫಸಲ್‍ಭೀಮಾ ಯೋಜನೆಯು ಅವೈಜ್ನಾನಿಕವಾಗಿದ್ದು, ಈ ಯೋಜನೆಯು ರೈತರಿಗೆ ವರವಾಗದೇ ಶಾಪವಾಗಿ ಪರಿಣಿಸಿದೆ ಎಂದು ಅರೋಪಿಸಿದರು.
ಜೆಡಿಎಸ್ ಪಕ್ಷದ ಕಂಪ್ಲಿಕ್ಷೇತ್ರದ ಕಾರ್ಯಾದ್ಯಕ್ಷ ಹೆಚ್‍ಎಂ. ವಿಶ್ವನಾಥಸ್ವಾಮಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ  ಬಹುತೇಕ ರೈತರು ಮೆಣಸಿನಕಾಯಿ ಬೆಳೆಬೆಳೆದು ಲಕ್ಷಾಂತರರೂಗಳಷ್ಟು ನಷ್ಟಹೊಂದಿದ್ದಾರೆ. ಇದರಿಂದ ಮನನೊಂದು ವಾರಕ್ಕೊಬ್ಬ ರೈತರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರ ಗತಿಏನು? ಎಂದು ಎಂದರು. ಆದ್ದರಿಂದ ಮೆಣಸಿನಕಾಯಿಬೆಳೆಯ ಪ್ರತಿ 1 ಎಕ್ಟೇರ್ ರೂ.1ಲಕ್ಷ, ಹತ್ತಿಬೆಳೆ 1ಎಕ್ಟೇರ್‍ಗೆ ರೂ.50ಸಾವಿರ ಮತ್ತು ಭತ್ತ 1ಎಕ್ಟೇರ್‍ಗೆ ರೂ.75ಸಾವಿರಗಳನ್ನು ಪರಿಹಾರವಾಗಿ ನೀಡಿ ರೈತರಿಗೆ ಆಸರೆಯಾಗಬೇಕೆಂದು ಒತ್ತಾಯಿಸಿದರು. ಜೆಡಿಎಸ್ ಕಂಪ್ಲಿಕ್ಷೇತ್ರದ ಆಕಾಂಕ್ಷಿ ಹಡ್ಲಿಗಿ ಸಿ.ಮಲ್ಲಿಕಾರ್ಜುನ ಮಾತನಾಡಿ, ನಮ್ಮನ್ನಾಳುವ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತರ ಪರವಾಗಿ ಯೋಜನೆಗಳನ್ನು ರೂಪಿಸಿದೇ ದೊಡ್ಡ-ದೊಡ್ಡ ಬಂಡವಾಳಶಾಹಿಗಳ ಪರವಾಗಿ ಯೋಜನೆಗಳನ್ನು ರೂಪಿಸಿ ರೈತರನ್ನು ದಿವಾಳಿಗೆ ತಂದೊಡ್ಡುತ್ತಿದ್ದಾರೆ ಎಂದು ವಿಷಾದವ್ಯಕ್ತಪಡಿಸಿದರು. ಮತ್ತು ಕ್ರುಷಿಗೆ ಸಂಬಂದಿಸಿದಂತೆ ಎಲ್ಲಾ ಪರಿಕರಗಳನ್ನು ಕಡಿಮೆಧರದಲ್ಲಿ ಸಿಗುವಂತೆ ಸರ್ಕಾರಗಳು ಕ್ರಮಕೈಗೊಂಡು ಅನ್ನದಾತನ ನೆರೆವಿಗೆ ಧಾವಿಸಬೇಕೆಂದು ನುಡಿದರು.
 ಸಂತಾಪ ; 
ಇತ್ತೀಚಿಗೆ ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಮೆಣಿಸಿನಕಾಯಿ ಬೆಳೆ ನಾಶವಾಗಿದ್ದರಿಂದ ಬಾದನಹಟ್ಟಿ ಗ್ರಾಮದ ರೈತ ದರೂರುಗಾದಿಲಿಂಗಪ್ಪ, ಮದಿರೆಮೋಹನ, ಮತ್ತು ಚಾನಾಳು ನರಸಿಂಹರೆಡ್ಡಿಯವರು ಬೆಳೆನಾಶಕ್ಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಕಾರಣ ಅವರ ಆತ್ಮಕ್ಕೆ ಶಾಂತಿಕೋರಿ  ಎಲ್ಲಾ ಜೆಡಿಎಸ್ ಮುಖಂಡರು, ಎದ್ದುನಿಂತು ಸಂತಾಸ ಸೂಚಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಂಪ್ಲಿಕ್ಷೇತ್ರದ ಜೆಡಿಎಸ್ ಅದ್ಯಕ್ಷ ಮದಿರೆವಿಜಯಕುಮಾರ್‍ಗೌಡ, ದಮ್ಮೂರುನಾರಾಯಣರೆಡ್ಡಿ, ಮದಿರೆಹೇಮರೆಡ್ಡಿ, ಕೆ.ದೊಡ್ಡಬಸಪ್ಪ, ಮುಷ್ಟಗಟ್ಟೆ ಜಡೆಪ್ಪ, ಮಂಜುನಾಥ, ಸೇರಿದಂತೆ ಇತರೆ ಜಡಿಎಸ್ ಕಾರ್ಯಕರ್ತರು ಇದ್ದರು,