
ದಾವಣಗೆರೆ. ಮೇ.೨೫; ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಬೋನಸ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯಮಟ್ಟದಲ್ಲಿ ಎಂ.ಎಸ್ ಪಿಗೆ ಕಾಯ್ದೆಯನ್ನು ಜಾರಿಗೆ ತರಬೇಕು. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಅನುಕೂಲವಾಗಲಿದೆ.ಈ ಕಾಯ್ದೆಯನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿದಾರರಿಗೆ ಕನಿಷ್ಠ ೬ ರಿಂದ ೧ ವರ್ಷ ಜೈಲು ಹಾಗೂ ದಂಡ, ಪರವಾನಗಿ ರದ್ದು ಎಂಬ ಕಾನೂನು ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ಬೋನಸ್ ರೂಪದಲ್ಲಿಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳ ಹಿಂದೆ (ಬಿಪಿಎಲ್) ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಗುರುತಿಸುವ ಮಾನ ದಂಡಗಳನ್ನು ರೂಪಿಸುತ್ತಾ, ಅದರಲ್ಲಿ ಮೊಬೈಲ್, ಮೋಟರ್ ಬೈಕ್ , ಟಿ.ಎ ಇರುವ ಆಗಿರಲಿಲ್ಲ, ಆದರೆ ಕಾಲ ಬದಲಾಗಿದೆ ಬಿಎಲ್ ಕುಟುಂಬಗಳು: ಟಿವಿ, ಮೊಬೈಲ್, ಮೋಟರ್ ಸೈಕಲ್ ಜಮೀನು ಹೊಂದಿರುತ್ತಾರೆ, ಆದ್ದರಿಂದ ಸರ್ಕಾರವು ಬಿಪಿಎಲ್ ಕುಟುಂಬಗಳು ಮಾನದಂಡವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಅಕಾಲಿಕ ಮಳೆಗೆ ಹಾಳಾದ ಎಲ್ಲಾ ಬೆಳೆಗಳಿಗೆ ತಕ್ಷಣಕ್ಕೆ ವೈಜ್ಞಾನಿಕ ಬೆಲೆ ಪರಿಹಾರ ನೀಡಲು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಹುಚ್ಚವ್ವನಹಳ್ಳಿ,ಗುಮ್ಮನೂರು ಬಸವರಾಜ್, ಚಿರಂಜೀವಿ,ರಾಜು,ಭಗತ್ ಸಿಂಹ ಮತ್ತಿತರರಿದ್ದರು.