ಅಕಾಲಿಕವಾಗಿ ನಿಧನರಾದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ

ವಿಜಯಪುರ, ಸೆ.8-ಅಕಾಲಿಕವಾಗಿ ನಿಧನರಾದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಬಿಜೆಪಿ ಕಾರ್ಯಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಪಕ್ಷದ ಶಾಸಕರು, ಹಿರಿಯ ಧುರೀಣರು ದಿ.ಉಮೇಶ ಕತ್ತಿ ಅವರ ವ್ಯಕ್ತಿತ್ವದ ಅಂಶಗಳನ್ನು ಹೇಳಿ ಕಣ್ಣೀರಿಟ್ಟರು, ಒಡನಾಟವನ್ನು ಸ್ಮರಿಸಿಕೊಂಡು ಕಂಬನಿ ಮಿಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ದಿ.ಉಮೇಶ ಕತ್ತಿ ಅವರ ಅಕಾಲಿಕ ನಿಧನದ ಸುದ್ದಿ ಆಘಾತ ತರಿಸಿದೆ, ಮುತ್ಸದ್ಧಿ ರಾಜಕಾರಣಕ್ಕೆ ಹೆಸರಾಗಿದ್ದ ದಿ.ಉಮೇಶ ಕತ್ತಿ ನಾಡು ಕಂಡ ಅಪರೂಪದ ರಾಜಕಾರಣಿ, ಅವರ ಸೇವೆ ಇನ್ನೂ ಅಗತ್ಯವಿತ್ತು, ಆದರೆ ವಿಧಿ ಅವರನ್ನು ಕರೆಸಿಕೊಂಡಿದೆ, ಭಗವಂತ ಅವರ ಪವಿತ್ರಾತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದರು.
ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ದಿ. ಉಮೇಶ ಕತ್ತಿ ಅವರ ಅಗಲಿಕೆ ದಿಗ್ಭ್ರಮೆ ಮೂಡಿಸಿದೆ. ಕಳೆದ ವಾರ ನನ್ನ ಮತಕ್ಷೇತ್ರದಲ್ಲಿ ಪ್ರವಾಸ ಮಾಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು,ಜನರ ಕೆಲಸಗಳಿಗೆ 24*7 ಸಿದ್ಧವಿರುತ್ತಿದ್ದ ಕತ್ತಿ ಅವರ ಅಗಲಿಕೆ ನೋವು ತರಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ದಿ.ಉಮೇಶ ಕತ್ತಿ ಜನಪರ ಮನಸ್ಸಿನ ಜನನಾಯಕ, ಉತ್ತರ ಕರ್ನಾಟಕದ ಪ್ರಗತಿಯ ಬಗ್ಗೆ ದೊಡ್ಡ ಕನಸು, ಆಶಯಗಳನ್ನು ಹೊಂದಿದ್ದರು, ಉತ್ತರ ಕರ್ನಾಟಕ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ ಎಂದು ಕಣ್ಣೀರಿಟ್ಟರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ದಿ.ಉಮೇಶ ಕತ್ತಿ ಸರಳತೆ, ಸ್ನೇಹಪರ ವ್ಯಕ್ತಿತ್ವದ ಪ್ರತೀಕ ಎಂದರೂ ತಪ್ಪಾಗಲಾರದು, ಎಲ್ಲರೊಂದಿಗೂ ಆತ್ಮೀಯತೆಯಿಂದ ಮನೆಯ ಹಿರಿಯನಂತೆ ಬೆರೆಯುತ್ತಿದ್ದ ದಿ.ಉಮೇಶ ಕತ್ತಿ ಅವರ ಅಕಾಲಿಕ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಸಾವವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ.ಉಮೇಶ ಕತ್ತಿ ಅವರು ವಿಜಯಪುರ ಜಿಲ್ಲೆಯ ಪ್ರಗತಿ, ಕಾರ್ಯಕರ್ತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು, ಈ ಬಗ್ಗೆ ತಮ್ಮ ಅನೇಕ ಭಾವನೆಗಳನ್ನು ಹಂಚಿಕೊಂಡಿದ್ದರು ಎಂದು ಸ್ಮರಿಸಿ ಕಣ್ಣೀರಿಟ್ಟರು.
ಬೆಳಗಾವಿ ವಿಭಾಗದ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ದಿ.ಉಮೇಶ ಕತ್ತಿ ಅವರು ಶ್ರೇಷ್ಠ ವ್ಯಕ್ತಿತ್ವದ ಜನನಾಯಕರಾಗಿದ್ದರು. ಅವರ ಸರಳತೆ, ಜನಪರ ಕಾಳಜಿ ಪ್ರತಿಯೊಬ್ಬರಿಗೂ ಆದರ್ಶ ಎಂದರು.
ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಪ್ರಮುಖರಾದ ಡಾ.ಸುರೇಶ ಬಿರಾದಾರ, ಬವವರಾಜ, ಬಿರಾದಾರ, ಹಾಗೂ ಮಲ್ಲಿಕಾರ್ಜುನ,ಜೋಗುರ, ಶಿವರುದ್ರ ಬಾಗಲಕೋಟ, ಸಂಜಯ ಪಾಟೀಲ ಕನಮಡಿ, ಜಿ.ಡಿ.ಅಂಗಡಿ, ಶಂಕರಗೌಡ ಪಾಟಿಲ್, ರವಿಕಾಂತ್ ಬಗಲಿ, ಬಿಮಾಶಂಕರ ಹದನೂರ, ಶಂಭುಲಿಂಗ ಕಕ್ಕಳಮೇಲಿ, ರಾಜೆಶ ತಾವಸೆ ಪ್ರೇಮಾನಂದ ಬಿರಾದರ್, ರಾಜು ಬಿರಾದಾರ, ಪಿಂಟೂ,ಕುಂಬಾರ, ಸಂಪತ್,ಕೋವಳ,ಸಚಿನ ಬೋಂಬಲೆ, ಕಲಮೆಶ ಹಿರೇಮಠ ,ರವಿ ಬಿರಾದಾರ, ಚಂದ್ರು, ಚೌದರಿ, ವಿನಾಯಕ್, ದೈಹಿಂಡೆ, ಸೆಕರ ಬಾಗಲಕೋಟ, ಸಂತೋಷ ನಿಬರಗಿ, ಮಲ್ಲಮ್ಮ ಜೋಗುರ, ವಿಜಯಲಕ್ಷ್ಮಿ ಹಮಿತಕಾಣೆ ಶರಣು ಸಬರದ, ಸತೀಶ ಅಗಸರ, ವಿಜಯ ಹಿರೇಮಠ, ಪ್ರವೀಣ್ ಕೂಡಗಿ, ಛಾಯಾ ಮಶಿಯವರ, ರವಿ, ಚೌಹಾಣ್, ಶ್ರೀಧರ್ ಬಿಜ್ಜರಗಿ ವಿಜಯಪುರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ, ಪಾಪುಸಿಂಗ, ರಜಪೂತ ಉಪಸ್ಥಿತರಿದ್ದರು.