ಅಕಾಲಿಕಮಳೆಗೆ ನೀರಿನಲ್ಲಿ ತೋಯ್ದ ಮೆಣಸಿನಕಾಯಿ: ರೈತರ ಆತಂಕ .

ಕೆ.ಭೀಮಣ್ಣ
ಕುರುಗೋಡು, ನ.20.  ರೈತ ನಮ್ಮದೇಶದ ಬೆನ್ನೆಲುಬು. ರೈತರಿಂದಲೆ ನಾವೆಲ್ಲರೂ ಎಂದು ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು, ಮತ್ತು ರಾಜಕೀಯ ಜನಪ್ರತಿನಿಧಿಗಳು ತಮ್ಮ-ತಮ್ಮ ಭಾಷಣದ ಉದ್ದಗಲಗಕ್ಕೂ ರೈತರ ಮೇಲೆ ತೋರಿದ ಪ್ರೀತಿ ಬರೀ ಆಚಾರಕ್ಕೆ ಹೊರತು ಆಚರಣೆ ಇಲ್ಲ ಎಂಬುದು ಎದ್ದುಕಾಣುತ್ತಿದೆ. ಕುರುಗೋಡು ಕ್ರುಷಿ ಉತ್ಪನ್ನ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಮೆಣಸಿನಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ತಂದು ಒಣಗಿಹಾಕಿದಾಗ ಮೂಲಭೂತ ಸೌಲಭ್ಯವಿಲ್ಲದೆ ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ನೀರಿನಲ್ಲಿ ತೋಯ್ದುಹೋಗಿ ರೈತರು ಲಕ್ಷಾಂತರರೂಗಳ ಬೆಳೆಬಾಳುವ ಮೆಣಸಿನಕಾಯಿ ಬೆಳೆ ನಷ್ಟಹೊಂದಿದ್ದರೂ ಯಾವುದೇ ಅಧಿಕಾರಿಗಳಾಗಲಿ, ಅಥವಾ ಕ್ಷೇತ್ರದ ಜನಪ್ರತಿನಿಧಿಗಳಾಗಿ ಬಂದು ರಕ್ಷಣೆಗೆ ಮುಂದಾಗಿಲ್ಲ ಎಂದು ಮೆಣಸಿನಕಾಯಿ ಬೆಳೆಗಾರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಒಂದುರೀತಿಯಲ್ಲಿ ಕ್ರುಷಿ ಉಪಮಾರುಕಟ್ಟೆಯ ಪ್ರಾಂಗಣಲ್ಲಿ ಒಣಗಿಹಾಕಿದ ಮೆಣಸಿನಕಾಯಿಬೆಳೆ ಅಕಾಲಿಕ ಮಳೆಗೆ ತೋಯ್ದು ‘ ಕೈಗೆ ಬಂದ…ತುತ್ತು ಬಾಯಿಗೆ ಬರಲಿಲ್ಲ’ ಎಂದು ಮೆಣಿಸಿನಕಾಯಿ ಬೆಳೆಗಾರರು ತೀವ್ರ ಆತಂಕವ್ಯಕ್ತಪಡಿಸಿದ್ದಾರೆ.
ಬೀದದೀಪಕೊರತೆ – ಕುರುಗೋಡಿನ ಕ್ರುಷಿ ಉತ್ಪನ್ನ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಮೂಲಭೂತ ಸಮಸ್ಯೆಗಳು ಎದ್ದುಕಾಣುತ್ತಿವೆ. ರೈತರು ತಾವು ಬೆಳೆದ ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳನ್ನು ಸುರಕ್ಷಿತವಾಗಿ ಹೊಣಗಿಹಾಕಲು ಮುಂದಾದಾಗ ಅಲ್ಲಿ ಬೀದಿದೀಪ ಇಲ್ಲದೆ ರಾತ್ರಿವೇಳೆ ಸಂಚರಿಸಲು ರೈತರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಇನ್ನೊಂದೆಡೆ ಪ್ರಾಂಗಣದಲ್ಲಿ ಅಲ್ಲಲ್ಲಿ ಗಿಡ-ಗಂಟೆಗಳು ಬೆಳೆದು ಸ್ವಚ್ಚತೆ ಇಲ್ಲ ಎಂದು ರೈತ ಚೆಲುವಾದಿ ಶ್ರೀಕಾಂತ್ ಅಸಮಾನದಾನ ವ್ಯಕ್ತಪಡಿಸಿದ್ದಾರೆ.
ಭರವಸೆ ; ಕುರುಗೋಡು ಕ್ರುಷಿ ಉತ್ಪನ್ನ ಉಪ-ಮಾರುಕಟ್ಟೆಯಲ್ಲಿ ಬೀದಿದೀಪ, ಸ್ವಚ್ಚತೆ, ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು  ಕ್ರುಷಿ ಮಾರುಕಟ್ಟೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಮೂಲಭೂತ ಸಮಸ್ಯೆಗಳನ್ನು ರೈತರಿಗೆ ಅನುಕೂಲವಾಗುವಂತೆ ಈಡೇರಿಸುವುದಾಗಿ ಕುರುಗೋಡು ಕ್ರುಷಿ ಉತ್ಪನ್ನ ಉಪ-ಮಾರುಕಟ್ಟೆ ಸಹಾಯಕ ಅಧಿಕಾರಿ ಸುಕ್ಕೂರುಸ್ವಾಮಿ ಭರವಸೆ ನೀಡಿದ್ದಾರೆ.
ಒಟ್ಟಾರೆ ಕುರುಗೋಡು ತಾಲೂಕುಕೇಂದ್ರ ಎಂದು ಜಾರಿಯಾಗಿದ್ದರೂ ಇಲ್ಲಿನ ಕ್ರುಷಿ ಉತ್ಪನ್ನ ಉಪ-ಮಾರುಕಟ್ಟೆ ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಇನ್ನು ಮುಂದೆ ಆದರೂ ಸಂಬಂದಪಟ್ಟ ಅಧಿಕಾರಿಗಳಾಗಲಿ, ಕ್ಷೇತ್ರದ ಜನಪ್ರತಿನಿಧಿಗಳಾಗಿ ಗಮನಹರಿಸಿ ಕುರುಗೊಡು ಉಪಮಾರುಕಟ್ಟೆ ಪ್ರಾಂಗಣದಲ್ಲಿ ರೈತರಿಗೆ ಕುಡಿಯುವ ನೀರು, ಬೀದಿದೀಪ, ಸ್ವಚ್ಚತೆ, ಸುಸಜ್ಜಿತವಾದ ಕಾಂಪೌಂಡು ನಿರ್ಮಾಣ ಸೇರಿದಂತೆ ಇತರೆ ಸೌಕರ್ಯಗಳನ್ನು ಸರಿಪಡಿಸಿ ರೈತರಿಗೆ ಆಸರೆಯಾಗಬೇಕೆಂದು ರೈತ ಭೂಪತಿ ಶೀನಪ್ಪ, ದಾಸರಹನುಮಂತಪ್ಪ, ಶಾಫೂರುಹಿಮಾಮ್‍ಸಾಬ್, ಗೂಳ್ಯಂಬಸವ, ಸುಲೇಮಾನ್‍ಸಾಬ್ ಇತರರ ಆಶಯವಾಗಿದೆ.