ಅಕಾಡೆಮಿ, ರಂಗಾಯಣ, ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಿ ಶಿವರಾಜ್ ಎಸ್ ತಂಗಡಗಿ ನೇಮಕ


ಸಂಜೆವಾಣಿ ವಾರ್ತೆ
ಕಾರಟಗಿ: ಜು:19: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಅಕಾಡಮಿ/ರಂಗಾಯಣ ಹಾಗೂ ಪ್ರಾಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಇವರನ್ನು ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವರೆಗೆ ನೇಮಿಸಿ ಅದೇಶಿದೆ,
ಪ್ರಾಧಿಕಾರಿಗಳು,
ಕರ್ನಾಟಕ ಸಾಹಿತ್ಯ ಅಕಾಡಮಿ ಬೆಂಗಳೂರು. ಕರ್ನಾಟಕ ಜಾನಪದ ಅಕಾಡಮಿ ಬೆಂಗಳೂರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಬೆಂಗಳೂರು. ಕರ್ನಾಟಕ ಲಲಿತ ಕಲಾ ಅಕಾಡಮಿ ಬೆಂಗಳೂರು. ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು.ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಂಗಳೂರು.ಕರ್ನಾಟಕ ಶಿಲ್ಪಿಕಲಾ ಅಕಾಡಮಿ ಬೆಂಗಳೂರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಂಗಳೂರು.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಬೆಂಗಳೂರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮಡಿಕೇರಿ. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ. ಕರ್ನಾಟಕ ಬಯಲಟಾ ಅಕಾಡಮಿ ಬಾಗಲಕೋಟ.ಕರ್ನಾಟಕ ಬಂಜಾರ ಸಂಸ್ಕೃತಿ ಭಾಷೆ ಅಕಾಡಮಿ ಬೆಂಗಳೂರು. ಶಿಲ್ಪಿ ಗುರುಕುಲ ಬೆಂಗಳೂರು.
 ರಂಗಾಯಣಗಳು:
ಮೈಸೂರು ರಂಗಾಯಣ. ಶಿವಮೊಗ್ಗ ರಂಗಾಯಣ. ಧಾರವಾಡ ರಂಗಾಯಣ. ಕಲುಬುರ್ಗಿ ರಂಗಾಯಣ. ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ. ಯಕ್ಷರಂಗಾಯಣ ಕಾರ್ಕಳ ಉಡುಪಿ.
ಪ್ರಾಧಿಕಾರಗಳು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು. ಕುವೆಂಪು ಭಾಷಾ ಭಾರತೀ ಪ್ರಾಧಿಕಾರ ಮಲ್ಲತ್ತ ಹಳ್ಳಿ ಬೆಂಗಳೂರು,
ಅಕಾಡಮಿ/ರಂಗಾಯಣ ಹಾಗೂ ಪ್ರಾಧಿಕಾರಿಗಳಿಗೆ ಅಧ್ಯಕ್ಷರನ್ನಾಗಿ ಸಚಿವ ಶಿವರಾಜ್ ಎಸ್ ತಂಗಡಗಿ ಇವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೇಮಿಸಿ ಅದೇಶಿಸಿದ್ದಾರೆ,