ಅಕಸ್ಮಿಕ ಬೆಂಕಿಯಿಂದ ಮನೆ ಸುಟ್ಟು ಭಸ್ಮ ಅಪಾರಹಾನಿ

ಇಂಡಿ : ಜೂ.30:ತಾಲೂಕಿನ ಚಿಕ್ಕಬೇವನೂರ ಗ್ರಾಮದ ಬಡ ರೈತ ಕಾಂತಪ್ಪ ದೇವೇಂದ್ರಪ್ಪ ಮೇಲಿನಮನಿ ಇವರಿಗೆ ಸೇರಿದ ಮನೆಯೋಂದಕ್ಕೆ ಅಕಸ್ಮಿಕ ಬೆಂಕಿ ಹತ್ತಿ ಸುಟ್ಟು ಬಸ್ಮವಾಗಿದೆ. ಮನೆಯಲ್ಲಿದ್ದ ದವಸ,ದಾನ್ಯ, ಬಟ್ಟೆಗಳು, ಹಣ,ಬಂಗಾರದ ಒಡುವೆಗಳು, ಗೃಹ ಬಳಕೆ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ. ವಿಷಯತಿಳಿದು ಸ್ಥಳಕ್ಕೆ ಆಗಮಿಸಿದ ಬಿ,ಡಿ,ಪಾಟೀಲ ಅವರು ಸರಕಾರದಿಂದ ಪರಿಹಾರ ಕೊಡಸುವುದಾಗಿ ಹಾನಿಗೋಳಗಾದ ಕುಟುಂಬಕ್ಕೆ ಭರವಸೆ ನೀಡಿದರು.