ಅಂಬ್ಯೂಲೆನ್ಸ್ ಚಾಲಕರಾದ ಎಂ ಪಿ ರೇಣುಕಾಚಾರ್ಯ

ದಾವಣಗೆರೆ.ಮೇ.೨೭; ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಮೃತ ದೇಹ ಹೊತ್ತ ಅಂಬ್ಯೂಲೆನ್ಸ್ ಚಲಾಯಿಸುವ ಮೂಲಕ ಮತ್ತೊಮ್ಮೆ ಶಾಸಕ ಎಂ.ಪಿ ರೇಣುಕಾಚಾರ್ಯ ಜನ ಮೆಚ್ವುಗೆಗೆ ಪಾತ್ರರಾಗಿದ್ದಾರೆ.ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿ ಕೋವಿಡ್ ನಿಂದ ಇಂದು ಮುಂಜಾನೆ ಮೃತ ಪಟ್ಟಿದ್ದರು.ಶಾಸಕರು ಮೃತ ಕುಟುಂಬಕ್ಕೆ 15 ಸಾವಿರ ವೈಯಕ್ತಿಕ ಸಹಾಯ ನೀಡಿದ್ದಾರೆ ಅಲ್ಲದೇ ತಮ್ಮ ತಂದೆತಾಯಿ ಸ್ಮರಣಾರ್ಥವಾಗಿ ನೀಡಿದ್ದ ಅಂಬ್ಯುಲೆನ್ಸ್ ಚಲಾಯಿಸಿ ಮೃತ ಪಟ್ಟವ್ಯಕ್ತಿಯ ಗ್ರಾಮಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.