ಅಂಬ್ಯೂಲೆನ್ಸ್‍ಗಳು ಹೆಚ್ಚಿನ ದರ ಪಡೆದರೆ ಕ್ರಮ

ಬೀದರ:ಎ.27: ಜಿಲ್ಲೆಯಲ್ಲಿ ರೋಗಗಳಿಗೆ ಸಾಗಿಸಲು ಖಾಸಗಿ ಅಂಬ್ಯೂಲನ್ಸ್ ದವರು ಇತ್ತೀಚೆಗೆ ಹೆಚ್ಚಿನ ದರ ಪಡೆಯುತ್ತಿರುವುದು ಸಾರ್ವಜನಿಕರಿಂದ ಮತ್ತು ಇತರೆ ಮೂಲಗಳಿಂದ ತಿಳಿದುಬಂದಿರುತ್ತದೆ.
ಖಾಸಗಿ ಅಂಬ್ಯೂಲೆನ್ಸ್ ಅವರು ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದಿದ್ದಲ್ಲಿ ನೇರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶಿವಶಂಕರ ಅವರ ಮೊಬೈಲ್: 9449864038 ಹಾಗೂ ಬೀದರ್ ಜಿಲ್ಲಾ ಕೋವಿಡ್ ವಾರ ರೂಮ್ ದೂರವಾಣಿ: 08482224319 ಕರೆ ಮಾಡಿ ದೂರು ದಾಖಲಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.