ಅಂಬ್ಯುಲೆನ್ಸ್ ನಲ್ಲೇ ಅವಳಿ ಮಕ್ಕಳ ಜನನ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.21 :- ಎರಡನೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯೋ ಮಾರ್ಗ ಮಧ್ಯೆದಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಮಹಾತಾಯಿ ಅಂಬ್ಯುಲೆನ್ಸ್ ನಲ್ಲೇ ಜನ್ಮ ನೀಡಿದ ಘಟನೆ ಕೂಡ್ಲಿಗಿ ಸಮೀಪದ ಪಾಲಯ್ಯಕೋಟೆ ಹತ್ತಿರದಲ್ಲಿ ಕಳೆದ ಮಧ್ಯರಾತ್ರಿ ಜರುಗಿದೆ.
ಪಾಲಯ್ಯನಕೋಟೆ ಗ್ರಾಮದ ಹಂಪಮ್ಮಬಸವರಾಜ (30) ಎಂಬ ಮಹಿಳೆಯೇ ಅವಳಿ ಮಕ್ಕಳಿಗೆ ಜನ್ಮನೀಡಿದ ಮಹಾತಾಯಿಯಾಗಿದ್ದಾಳೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 108ಕ್ಕೆ ಕರೆಮಾಡಲಾಗಿ ಗ್ರಾಮಕ್ಕೆ ತಕ್ಷಣ ಧಾವಿಸಿದ ಉಜ್ಜಿನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ 108ರ ಅಂಬ್ಯುಲೆನ್ಸ್ ಹಂಪಮ್ಮ ನನ್ನು ಮತ್ತು ಅವರ ಕುಟುಂಬದವರನ್ನು ಕರೆದುಕೊಂಡು ಉಜ್ಜಿನಿಗೆ ಹೋಗುವ ಮಾರ್ಗಮಧ್ಯದಲ್ಲೆ  ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ   ತಕ್ಷಣ ಸಹಜ ಹೆರಿಗೆ ಮಾಡಿಸುವಲ್ಲಿ 108ರ ಅಂಬ್ಯುಲೆನ್ಸ್ ಆರೋಗ್ಯ ಸಿಬ್ಬಂದಿ  ಶುಶ್ರೂಷಕಿ ನಾಗವೇಣಿ ಮತ್ತು ಚಾಲಕ ಕೊಟ್ರೇಶರ ಸಮಯಪ್ರಜ್ಞೆಯಿಂದ ಮಧ್ಯ ರಾತ್ರಿ 12ಗಂಟೆಗೆ ಮೊದಲ ಹೆಣ್ಣು ಮಗು ನಂತರ 12-20ಗಂಟೆಗೆ ಎರಡನೇ ಮಗು ಆಂಬುಲೆನ್ಸ್ ನಲ್ಲೇ  ಜನಿಸಿದ್ದು ಅವಳಿ ಮಕ್ಕಳು ಮತ್ತು ಹಂಪಮ್ಮ ಆರೋಗ್ಯವಾಗಿದ್ದಾರೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜ್ಜಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.