ಅಂಬೇಡ್ಕರ ಮಹಾಪರಿನಿರ್ವಾಣ ದಿನ ಆಚರಣೆ

ಬೀದರ,ಡಿ.8: ನಗರದ ಬಾಲಭವನ ಹತ್ತಿರದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಮಹಾಪರಿನಿರ್ವಾಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸವಿತಾ ವೆಂಕಟೇಶ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಅಂಬೇಡ್ಕರ ಅವರ ಕುರಿತು ಮಾತನಾಡುತ್ತಾ, ಅಂಬೇಡ್ಕರ್ ಅವರು ಮಹಾ ಮಾನವತಾವಾದಿ ಹಾಗೂ ಅವರ ಚಿಂತನೆಗಳು ಜಗತ್ತಿಗೆ ಮಾದರಿಗಳಾಗಿವೆ. ಅವರು ದೀನ ದಲಿತರ ಪರವಾಗಿ ಧ್ವನಿ ಎತ್ತಿದ ಮಹಾನ ನಾಯಕರಾಗಿದ್ದರು. ಅವರು ಭಾರತದ ದಿವ್ಯ ಜ್ಯೋತಿಯಾಗಿದ್ದಾರೆಂದರು.ಕಾರ್ಯಕ್ರಮದಲ್ಲಿ ಸ್ವಧಾರ ಗೃಹದ ಸಿಬ್ಬಂದಿಗಳು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.