ಅಂಬೇಡ್ಕರ ನೀಡಿದ ಕೊಡುಗೆ ಮರೆಯುವಂತಿಲ್ಲ

ಕಲಬುರಗಿ :ಎ.17:ನಗರದ ಕೋಟನೂರ ಗ್ರಾಮದಲ್ಲಿರುವ ಸೇವಾ ಸಂಗಮ ಸಮಾಜ ಸೇವ ಸಂಸ್ಥೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ರವರ 130 ನೇ ಜಯಂತಿಯನ್ನು ಸರಳವಾಗಿ ಆಚರಣೆಯನ್ನು ಮಾಡಲಾಯಿತ್ತು. ಜೀ.ಡಿ.ಇ.ಎಸ್. ಕಾರ್ಯದರ್ಶಿಗಳಾದ ಫಾ. ವಿಲಸೇಂಟ್ ರವರು ಮಾತನಾಡುತ್ತಾ ಅಂಬೇಡ್ಕರ ರವರು ನೀಡಿದ ಕೋಡುಗೆಯನ್ನು ನಾವು ಯಾವತ್ತು ಮರೆಯುವಂತಿಲ್ಲ, ಅವರು ನಮ್ಮ ಭಾರತ ದೇಶದ ಸಂವಿಧಾನವನ್ನು ಬರೆದವರು. ನಾವು ಇವತ್ತು ಈ ಸಂವಿಧಾನದಲ್ಲಿ ಪ್ರತಿಯೋಬ್ಬ ಪ್ರಜೆಗೆ ಮೂಲಬೂತ ಹಕ್ಕುಗಳನ್ನು ನೀಡಿದ್ದು. ಪ್ರತಿ ಹಕ್ಕುಗಳನ್ನು ನಾವು ಪಡೆಯುವದಕ್ಕೆ ನಮ್ಮ ಈ ಸಂವಿಧಾನವನ್ನು ನಮ್ಮಗೆ ನೀಡಿದೆ ಎಂದು ತಿಳಿಸಿದರು. ಸೇವಾ ಸಂಗಮ ಸಂಸ್ಥೆಯ ನಿಯೋಜಿತ ನಿರ್ದೇಶಕರಾದ ಫಾ. ವಿಕ್ಟರ ವಾಸ ರವರು ಈ ಸಂಧರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ವಾಚನ ಮಾಡಿಸಿದರು. ಫಾ. ಡೇವಿಡ್. ಸದಾನಂದ ಹಾಗೂ ಸೇವಾ ಸಂಗಮ ಸಂಸ್ಥೆಯ ಎಲ್ಲಾ ವಲಯ ಸಂಯೋಜಕರು, ಸಿಬ್ಬಂದಿಗಳು ಭಾಗವಹಿಸಿದರು.