ಅಂಬೇಡ್ಕರ ಜಯಂತಿ ನಿಮಿತ್ಯ 8 ಗಂಟೆ ನಿರಂತರ ಭಜನೆ

ಬೀದರ :ಎ.16:ನಗರದ ಅಂಬೇಡ್ಕರ ವೃತ್ತದಲ್ಲಿ ಕರ್ನಾಟಕ ಪಂಚಶೀಲಾ ಕಲಾ ಸಾಹಿತ್ಯ ಪರಿಷತ್ತು ಬೀದರ ವತಿಯಿಂದ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ132 ನೇ ಜಯಂತಿ ನಿಮಿತ್ತ ಬೆಳಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬುದ್ಧ ಭೀಮ ಭಜನೆ ಕಾರ್ಯಕ್ರಮವನ್ನು ಜರುಗಿತ್ತು ಜಿಲ್ಲೆಯ ವಿವಿಧ ಭಾಗ ಮತ್ತು ಬೇರೆ ಜಿಲ್ಲೆಯಿಂದ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಜಯಂತಿ ಸಮಿತಿಯ ಸಾಂಸ್ಕøತಿಕ ಘಟಕದ ಅಧ್ಯಕ್ಷ , ಸಾಹಿತಿ ಸುಬ್ಬಣ್ಣ ಕರಕನಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಪಂಚಶೀಲಾ ಕಲಾ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಅಧ್ಯಕ್ಷ ಅರ್ಜುನ ಕಾಂಚೆ ಅಧ್ಯಕ್ಷ ಲಕ್ಷ್ಮಣರಾವ ಕಾಂಚೆ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಬಡಿಗೇರ, ಪದಾಧಿಕಾರಿಗಳಾದ ದಸರಥ ದೊಡ್ಡಿ, ಅಶೋಕ ಸಿಂಧೆ ನರಸಿಂಗ ಚಿದ್ರಿ ದಸರಥ ಚಾಂಬೋಳ, ಗೌತಮ ಗುರುನಾಥ, ಪುಣ್ಯವತಿ ಪುನೀತಾ ಗಾಯಕವಾಡ,ಪುಸ್ಪ ಕಂಠಿ, ಚಿತ್ರಮ ಭಾಸ್ಕರ ರಾಜು ಶರಣಪ್ಪಾ ಮಾಳೆಗಾಂವ ತುಕರಾಮ ನೇಳಗೆ ಬಾಬುರಾವ ಮೈಲೂರು ಸೇರಿದಂತೆ ಅನೇಕ ಭಜನೆ ಕಲಾವಿದರು ಹಾಡುಗಳನ್ನು ಹಾಡಿದರು. ಶಾಲೆಯ ಕಲಿಯರಿ ಅಕ್ಕತಂಗೇರೆ, ಇಂದಿನ ಯುಗದ ದಲಿತ ಸಮಾಜದ, ಅಸಾನು ಭೀಮಾಜಿಕಾ ಹಮ್ಮ ಇನಸಾನ ಬನ್ನಗೈಯ್, ಬಿಟ್ಟು ಬಿಡು ನಿನ್ನ ಕೆಟ್ಟ ಚಟ್ಟವ, ಬುದ್ಧಕಾ ಧರರ್ತಿ ಯುದ್ದನಾ ಚಾಯೆ, ವಿಶ್ವ ಜ್ಞಾನಿ ಅಂಬೇಡ್ಕರ, ಮುಂತಾದ ಹಾಡುಗಳನ್ನು ಹಾಡಿದರು.