ಅಂಬೇಡ್ಕರ ಆದರ್ಶ ಪುರುಷ: ಡಾ.ಕೆ ಶಿವರಾಜ

ಸಿಂಧನೂರು,ಮಾ.೦೧- ಬಹುತ್ವದ ಪರಿಕಲ್ಪನೆಯೇ ಭಾರತವಾಗಿದೆ. ಮಾನವ ಜನಾಂಗದ ಒಳಿತಿಗಾಗಿ ಓದಿದ ಮಹಾನ್ ನಾಯಕ ಹಾಗೂ ಆದರ್ಶ ಪುರುಷ ಬಾಬಾ ಸಾಹೇಬ್ ಅಂಬೇಡ್ಕರ ಎಂದು ಸಹನಾ ಮಕ್ಕಳ ಆಸ್ಪತ್ರೆ ಡಾ.ಕೆ.ಶಿವರಾಜ ಮಾತನಾಡಿದರು.
ತಾಲೂಕಾ ದಲಿತ ಸಾಹಿತ್ಯ ಪರಿಷತ್ತು ತಾಲೂಕಿನ ಮಲ್ಲಾಪುರ ಗ್ರಾಮದ ಶೃತಿ ಮತ್ತು ದುಗ್ಗಪ್ಪ ಪತ್ರಕರ್ತರು ಇವರ ಮನೆಯಲ್ಲಿ ಸಂಜೆ ಹಮ್ಮಿಕೊಂಡಿದ್ದ ೧೦ನೇಯ ಮನೆಮನೆಗೆ ಮಹಾನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದ ಅವರು ಅಂಬೇಡ್ಕರ್ ಅವರ ವಾಕ್ಚಾತುರ್ಯವನ್ನು ಕಂಡು ನೀವು ಬ್ರಾಹ್ಮಣರಾ ಎಂದು ಕೇಳಿದಾಗ ಇಲ್ಲಾ ನಾನೊಬ್ಬ ದಲಿತ ಎಂದಾಗ ಮೇಲ್ವರ್ಗದವರು ಮಾತ್ರ ಈ ರೀತಿ ಮಾತನಾಡಲು, ಜ್ಞಾನ ಹೊಂದಲು ಸಾಧ್ಯ ಎಂದು ಹೇಳಿದರಂತೆ.
ಮನುಸ್ಮೃತಿ ಗ್ರಂಥದ ಪ್ರಕಾರ ಬ್ರಾಹ್ಮಣರು ಅಪರಾಧ ಮಾಡಿದರೆ ಅವರಿಗೆ ಶಿಕ್ಷೆ ಇಲ್ಲ. ಇತರೆ ಜನಾಂಗದವರು ಅಪರಾಧ ಮಾಡಿದರೆ ಅವರ ನಾಲಿಗೆ ಸೀಳಿ ಅವರನ್ನು ಊರಿನಿಂದ ಬಹಿಷ್ಕರಿಸಲಾಗುತ್ತಿತ್ತು. ಇಂಥಹ ಕಾನೂನು ಜಾರಿಯಾದರೆ, ಗುಲಾಮಗಿರಿ, ಶೋಷಣೆ, ಮೂಢನಂಬಿಕೆಯಂತಹ ಮೌಢ್ಯತೆಗೆ ನಾವೆಲ್ಲಾ ಬಲಿಯಾಗಬೇಕಾಗುತ್ತದೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಭಾರತದ ಸಂವಿಧಾನವು ಸಾರ್ವತ್ರಿಕವಾದ ಆಶಯಗಳನ್ನು ಹೊಂದಿರುವುದರಿಂದ ಅಂತಹ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಒಂದು ವೇಳೆ ಬದಲಾಯಿಸಿದ್ದೇ ಆದರೆ, ಮಾನವ ಕುಲಕ್ಕೆ ಧಕ್ಕೆವುಂಟಾಗುತ್ತದೆ ಎಂದು ಹೇಳಿದರು. ಭಾವ ಮತ್ತು ಭಾವನೆ ಬದಲಾದರೆ ಸಂವಿಧಾನ ಸುಂದರವಾಗಿ ಕಾಣುತ್ತದೆ. ಸಾಮಾಜಿಕ ಅಸಮಾನತೆಯನ್ನು ಬುದ್ದ ನಡೆದು ಖಂಡಿಸಿದ
ಬಸವ ನುಡಿದು ಖಂಡಿಸಿದರೆ ಅಂಬೇಡ್ಕರ್ ಬರೆದು ಖಂಡಿಸಿದರು.
೭೫ ವರ್ಷ ಒಪ್ಪಿಕೊಂಡು ಬಂದ ಸಂವಿಧಾನ ೫ ವರ್ಷದಲ್ಲಿ ಸಂವಿಧಾನ ಬದಲಾವಣೆ ಮಾತುಗಳು ಯಾಕೆ ಕೇಳಿ ಬರುತ್ತವೆಯೋ ತಿಳಿಯದಾಗಿದೆ ಎಂದರು. ಹೊಳೆಯಪ್ಪ ದಿದ್ದಿಗಿ ಈಶ್ವರ್ ಹಲಗಿ, ಮಾತನಾಡಿ ಅಂಬೇಡ್ಕರ್ ಅವರ ಜ್ಞಾನದ ಮಹತ್ವವನ್ನು ಯುವ ಜನಾಂಗಕ್ಕೆ ಮುಟ್ಟಿಸುವ ಕಾರ್ಯವನ್ನು ದಲಿತ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಹನ್ನೆರಡು ಮನೆಮನೆಗೆ ಮಹಾನಾಯಕ ಕಾರ್ಯಕ್ರಮ ಮತ್ತು ಹನ್ನೆರಡು ಅರಿವಿನ ನಡಿಗೆ ಕಾಲೇಜು ಕಡೆಗೆ ಎಂಬೆರಡು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿ ಯುವಜನರಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಮನಮನೆಗೆ ಮುಟ್ಟಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಡಾ. ಅರುಣಕುಮಾರ ಭೇರಿಗಿ ವಹಿಸಿದ್ದರು, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹುಸೇನಪ್ಪ ಅಮರಾಪುರ, ನಗರಸಭೆ ಸದಸ್ಯ ಕೆ.ಹನುಮೇಶ, ಗ್ರಾ.ಪಂ.ಸದಸ್ಯರಾದ ಯಮನಪ್ಪ ನಾಯಕ, ಮಲ್ಲಪ್ಪ,ಮುಖಂಡರಾದ ಯಮನಪ್ಪ, ತಿಮ್ಮನಗೌಡ ಅಯ್ಯಪ್ಪ ವಕೀಲರು, ಹೊಳೆಯಪ್ಪ ದಿದ್ದಿಗಿ, ಪರಶುರಾಮ, ಪ್ರಾಚಾರ್ಯರು ಪ್ರಕಾಶ್, ನರಸಪ್ಪ ಕಟ್ಟಿಮನಿ, ಡಾ.ರಾಮಕೃಷ್ಣ ಭಂಡಾರಿ, ಬಸಮ್ಮ ಉಪಸ್ಥಿತರಿದ್ದರು.
ರಾಮಣ್ಣ ಹಿರೇಬೇರಿಗಿ, ಶರಣಪ್ಪ ಹೊಸಳ್ಳಿ, ಪ್ರೊ.ಆಂಜನೇಯ್ಯ ರಾಮತ್ನಾಳ, ಬಿ.ರವಿಕುಮಾರ ಸಾಸಲಮರಿ, ಡಾ.ವೆಂಕಟನಾರಾಯಣ, ಮಸ್ಕಿ ದಲಿತ ಸಾಹಿತ್ಯ ಪರಿಷತ್ತಿನ ತಾಲುಕಾಧ್ಯಕ್ಷರಾದ ದುರುಗಪ್ಪ ಗುಡದೂರು, ತಿಮ್ಮಣ್ಣ ಕಲಮಂಗಿ, ಮೌಲಪ್ಪ ಭಂಡಾರಿ, ದುರುಗಪ್ಪ ಡಿಡಿ, ಮುದುಕಪ್ಪ ಕಲ್ಮನಿ, ದುಗ್ಗಪ್ಪ (ಬಾಲು), ಹಂಪಣ್ಣ ಮಡಿವಾಳ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮತಾಗೀತೆಯನ್ನು ಡಾ.ಹುಸೇನಪ್ಪ ಅಮರಾಪುರ ಮತ್ತು ಸಂಗಡಿಗರು ಹಾಡಿದರು ಅಯ್ಯಪ್ಪ ಹರೇಟನೂರು ನಿರೂಪಿಸಿದರು. ಶರಣ ಬಸವ ಸ್ವಾಗತಿಸಿದರು. ಪರಶುರಾಮ ಮಲ್ಲಾಪುರ ವಂದಿಸಿದರು. ಶೃತಿ ದುಗ್ಗಪ್ಪ ದಂಪತಿಗಳಿಗೆ ಪರಿಷತ್ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು.