ಅಂಬೇಡ್ಕರ್ ಹೆಸರು ನಾಮಕರಣಕ್ಕೆ ಮನವಿ

ಹೊನ್ನಾಳಿ.ಏ.೨; ಅಂಬೇಡ್ಕರ್ ಜಯಂತಿಯಂದು ನಗರದ ಟಿ.ಬಿ.ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ನಾಮಕರಣ ಮಾಡದಿದ್ದರೆ ನಾವೇ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕಾಗುತ್ತದೆ ಎಂದು ಒಕ್ಕೋಲರಿನಿಂದ ದಲಿತ ಮುಖಂಡರುಗಳು ಹೇಳಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಜಯಂತಿ ಕಾರ್ಯಕ್ರಮದ ನಿಮ್ಮಿತ್ತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರಾದ ದಿಡಗುರು ರುದ್ರೇಶ್,ಡಿ.ಸಿ.ತಮ್ಮಣ್ಣ,ಮಾರಿಕೊಪ್ಪ ಮಂಜುನಾಥ್,ಕುರುವ ಮಂಜುನಾಥ್ ಕೂಡಲೆ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿ ಎಂದು ಆಗ್ರಹಿಸಿದರು.ತಹಶೀಲ್ದಾರ್ ಬಸನಗೌಡ ಕೋಟುರ ಮಾತನಾಡಿ, ಏ 5 ರಂದು ಪುರಸಭೆಯಲ್ಲಿ ಪುರಸಭಾ ಸದಸ್ಯರ ಸಭೆ ಇದೆ ಆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.ಅಂದು ಕಾರ್ಯಕ್ರವನ್ನು ಸರಳವಾಗಿ ಆಚರಿಸಿದರೂ ಪರವಾಗಿಲ್ಲ ಆದರೆ ಅಂದು ಉಪನ್ಯಾಸ ಕಾರ್ಯಕ್ರಮ ಇರಬೇಕು ಆ ರೀತಿಯಲ್ಲಿ ವ್ಯವಸ್ಥೆ ಮಾಡಿ ಎಂದು ದಲಿತ ಮುಖಂಡರುಗಳು ಹೇಳಿದ್ದರಿಂದ ಅಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.ಇಒ ಗಂಗಾಧರಮೂರ್ತಿ.ಸಭೆಯಲ್ಲಿ ಉಪ ನೊಂದಣಾಧಿಕಾರಿ ವೀಣಾ,ಬಿಇಒ ರಾಜಿವ್,ಸಮಾಜ ಕಲ್ಯಾಣಾಧಿಕಾರಿ ದೊಡ್ಡ ಬಸವರಾಜು,ಜಿ.ಪಂ. ಎಇಇ ಅಜ್ಜಪ್ಪ,ಬೆಸ್ಕಾಂ ಎಇಇ ರವಿಕಿರಣ್,ಪುರಸಭೆ ಪ್ರಬಾರಿ ಮುಖ್ಯಾಧಿಕಾರಿ ಅಶೋಕ್, ದಲಿತ ಮುಖಂಡರಾದ ಕೆಂಗಲಹಳ್ಳಿ ಪ್ರಬಾಕರ್,ಸೊರಟುರು ಹನುಮಂಪ್ಪ, ನಾಯಕ ಸಮಾಜದ ಮುಖಂಡ ಕುಳಗಟ್ಟೆ ಶೇಖರಪ್ಪ ಸೇರಿದಂತೆ ಹಲವಾರು ದಲಿತ ಮುಖಂಡರುಗಳು ಪೂರ್ವಬಾವಿ ಸಭೆಯಲ್ಲಿ ಉಪಸ್ಥಿತರಿದ್ದರು.