ಅಂಬೇಡ್ಕರ್ ಹಿಂದುಳಿದ ವರ್ಗಗಳ ಆಶಾಕಿರಣ.

ಹೊಸಪೇಟೆ ಏ16: ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ಅಂಬೇಡ್ಕರ್ ಜಯಂತಿಯನ್ನು ನಗರದ ಅಹಿಂದ ಯುವವೇದಿಕೆ ವತಿಯಿಂದ ನಗರದ 9ನೇ ವಾರ್ಡ್ ಸಿದ್ದಲಿಂಗಪ್ಪ ಚೌಕಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ವೇದಿಕೆ ಮುಖಂಡ ಕುಬೇರದಲ್ಲಾಳಿ, ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಹಿಂದುಳಿದ ವರ್ಗಗಳ ಆಶಾಕಿರಣ ಮತ್ತು ಸಂವಿಧಾನ ಶಿಲ್ಪಿ, ಸಂವಿಧಾನದಲ್ಲಿ ಹಿಂದುಳಿದ ಭಾಗ್ಯಗಳ ಅಭಿವೃದ್ಧಿಗೆ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ, ಶ್ರಮಿಕ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಹೆಚ್.ವೆಂಕಟೇಶ್‍ರವರು ಮಾತನಾಡಿ, ಭಾರತ ದೇಶದಲ್ಲಿ ಹಿಂದುಳಿದ ವರ್ಗ ಶೋಷಿತ ಸಮಾಜ, ಮಹಿಳೆಯರು, ಕಾರ್ಮಿಕರ ಬಗ್ಗೆ ಹಲವಾರು ಕಾನೂನುಗಳನ್ನು ರಚನೆ ಮಾಡುವ ಮೂಲಕ ಸರ್ವರಿಗೂ ಸಮಪಾಲು ಮತ್ತು ಸಮಬಾಳು ತತ್ವದ ಅಡಿಯಲ್ಲಿ ದೇಶದಲ್ಲಿ ಎಲ್ಲಾ ಜಾತಿ ಜನಾಂಗದವರು ಶಾಂತಿ ಮತ್ತು ಸೌಹಾರ್ದತೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ಜನರಿಗೆ ನ್ಯಾಯವನ್ನು ದೊರಕಿಸಿಕೊಡಬೇಕಾಗಿದೆ ಎಂದರು.
ಸಿ.ಕೊಟ್ರೇಶ್, ಕೇಶವ, ಮಂಜುನಾಥ ಎಸ್.ಬಿ. ಗುಜ್ಜಲ್ ರಾಘವೇಂದ್ರ, ದೇವರಾಜ್.ಕೆ, ಬಸವರಾಜ್, ಕೆಂಚಪ್ಪ, ಚಂದ್ರಶೇಖರ್, ಮಲ್ಲಿಕಾರ್ಜುನ, ಸೈಕಾಲ್‍ಶಾಫ್ ಸೀನಾ, ಡಿಶ್ ನಾಗರಾಜ್, ಯಾದವ್ ತಿಮ್ಮಪ್ಪ, ಟಿ.ಬಿ.ಡ್ಯಾಂ ಗಣೇಶ್, ಇಂದು, ಪಿ, ಮಂಜುಳಾ, ಪಲ್ಲವಿ ಹಾಗೂ ಗಂಗಮ್ಮ ಇನ್ನಿತರರಿದ್ದರು.