ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹೋರಾಟ: 10ನೇ ದಿನಕ್ಕೆ ಕಾಲಿಟ್ಟ ಧರಣಿ

ವಿಜಯಪುರ,ಮೇ.30:ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಸಮಸ್ಯೆಗೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ. ಬಿ.ಆg.ï ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸತ್ಯಾಗ್ರಹದಲ್ಲಿ ಸಂಘಟನೆ ಅಧ್ಯಕ್ಷ ಶ್ರೀಶೈಲ ಕಾಖಂಡಕಿ ಅವರು ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನಿರಂತರ 10 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಸಮಸ್ಯೆ ಬಗೆಹರಿಸದೆ ಕೂಲಿ-ನಾಲಿ ಮಾಡಿ ತಿನ್ನುವ ಕಡು ಬಡವ ದಲಿತರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೂಡಲೇ ವಿಜಯಪುರ ಜಿಲ್ಲಾಡಳಿತ ನೊಂದ ದಲಿತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಮಲ್ಲವ್ವ ಚಲವಾದಿ, ರುಕ್ಮಿವ್ವ ಗುನ್ನಾಪುರ, ಸುನಂದಾ ಚಲವಾದಿ, ಕಸ್ತೂರಿ ಕಾಳೆ, ರಾಜಶ್ರೀ ಕಾಖಂಡಕಿ, ರುಕ್ಮಿಣಿ ಕಾಖಂಡಕಿ, ಸವಿತಾ ಕಾಖಂಡಕಿ, ಭಾರತಿ ಕಾರಜೋಳ, ರೇಣುಕಾ ಬನಸೋಡೆ, ಆಶಾ ಕುಬಕಡ್ಡಿ, ಆಶಾ ಮಾನೆ, ಜೂಲಿ ಶಿವಶರಣ, ಕಾವೇರಿ ವಾಲಿಕಾರ, ಬಾಬು ಶಿವಶರಣ, ಆಕಾಶ ಕಾಂಬಳೆ, ಪ್ರಕಾಶ ಚಲವಾದಿ, ಪ್ರೀತಮ ಚಲವಾದಿ, ಸಂಜು ಕಾಖಂಡಕಿ, ಬಸವಕುಮಾರ ಕಾಂಬಳೆ, ಶಿವರಾಜ ಕೂಡಗಿ, ಮಂಜುನಾಥ ಶಿವಶರಣ, ಕೃμÁ್ಣ ಚಲವಾದಿ, ರೋಹಿತ ಮಲಕಣ್ಣವರ, ಸಚಿನ ಕಾಖಂಡಕಿ, ಚಿಕ್ಕಯ್ಯ ಚಲವಾದಿ, ಕಿರಣ ಕಾಖಂಡಕಿ, ಉಮೇಶ ಕಾಖಂಡಕಿ, ಸೋಮಶೇಖರ ಕಾಖಂಡಕಿ, ಜಗದೀಶ ಕೂಡಗಿ, ಶೇಖರ ಕೂಡಗಿ ಸತೀಶ ಚಲವಾದಿ, ಅರವಿಂದ ಕಾಖಂಡಕಿ, ಬಸವರಾಜ ಕುಬಕಡ್ಡಿ ಶೋಭಾ ಚಲವಾದಿ, ಶೋಭಾ ಜವಳಗಿ, ಗೀತಾ ವಾಲಿಕಾರ, ಸತೀಶ ಕುಬಕಡ್ಡಿ, ಕೀರ್ತನಾ ನಡುವಿನಕೇರಿ, ಮಂಜುನಾಥ ಕಾಖಂಡಕಿ, ಮೀನಾಕ್ಷಿ ಕಾಖಂಡಕಿ,ಕೀರ್ತಿ ಕಾಖಂಡಕಿ, ಬಸವರಾಜ ಕಾಂಬಳೆ, ಶ್ರಾವಣಿ ಕೂಡಗಿ, ಸುಜಾತಾ ಕೂಡಗಿ ಅಂಕಿತಾ ಶಿವಶರಣ ಪ್ರತಾಪ ಚಿಕ್ಕಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.