ಅಂಬೇಡ್ಕರ್ ಸಮುದಾಯ ಭವನದಕ್ಕೆ ಗುದ್ದಲಿಪೂಜೆ

ಕೋಲಾರ,ಮಾ.೨೩- ಕೋಲಾರ ನಗರ ಟಮಕ ವಾರ್ಡ್ ನಂ-೧ ರಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ೧೨ ಗುಂಟೆ ಜಾಗಕ್ಕೆ ನಗರಸಭೆ ವತಿಯಿಂದ ೧೬ ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಯಿತು.
ಭೀಮಸೇನೆ ಅಧ್ಯಕ್ಷರಾದ ಪಂಡಿತ್ ಮುನಿವೆಂಕಟಪ್ಪ, ನಗರಸಭೆ ಹಾಲಿ ಅಧ್ಯಕ್ಷೆ ಶ್ವೇತಾ, ನಗರಸಭಾ ಮಾಜಿ ಸದಸ್ಯ ಲಾಲ್ ಬಹಾದ್ದೂರ್ ಶಾಸ್ತ್ರಿ, ಭೀಮಸೇನೆ ಜಿಲ್ಲಾ ಅಧ್ಯಕ್ಷ ಕೀಲುಕೋಟೆ ವೆಂಕಟಸ್ವಾಮಿ, ಟಮಕ ಯುವ ಮುಖಂಡರಾದ ಸಂತೋಷ್ ಕುಮಾರ್ ಎಚ್, ಕೃಷ್ಣಮೂರ್ತಿ, ಶ್ರೀನಾಥ, ಸುರೇಶ್ ಜಿ, ಮಲ್ಲೇಶ್, ನಾರಾಯಣಸ್ವಾಮಿ ಎ, ನಾರಾಯಣಸ್ವಾಮಿ ಎಂ. ಡಿಶ್ ಹರೀಶ್, ಭೀಮಸೇನೆ ಮಹಿಳಾ ಸಂಘದ ರಾಧಮ್ಮ, ಮುನಿವೆಂಕಟಮ್ಮ, ನಾನಮ್ಮ, ಯಲ್ಲಮ್ಮ, ರತ್ನಮ್ಮ, ಲಕ್ಷ್ಮೀದೇವಮ್ಮ ಹಾಜರಿದ್ದರು.