ಅಂಬೇಡ್ಕರ್ ಸಂವಿಧಾನ ಜೀವಕೇಂದ್ರವಾಗಿದೆ

ಕೋಲಾರ,ಡಿ.೭:ಮಹಾನ್ ಮಾನವಾತಾವಾದಿ ಬಾಬಾ ಸಾಹೇಬ್ ಡಾ. ಬಿ. ಅಂಬೇಡ್ಕರ್ ಅವರ ೬೫ರ ಪರಿ ನಿಬ್ಬಾಣ ದಿನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೇಮಗಲ್‌ನ ಕನ್ನಡ ವಿಭಾಗ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವೇಮಗಲ್ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಮಾತಾನಾಡಿ ಅಂಬೇಡ್ಕರ್ ಅವರು ದೇಶ ಕಂಡ ಶತಮಾನದ ವ್ಯಕ್ತಿ. ಮಹಾನ್ ಮಾನವತಾವಾದಿ. ಇಂತಹ ಮಹಾನ್ ಪುರುಷರ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಪರಸ್ಪರ ಪ್ರೀತಿ ಹೊಂದಾಣಿಕೆಯ ಬಾಳ್ವೆ ಮಾಡುವ ಮೂಲಕ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ತರುವ ನಿಟ್ಟಿನಲ್ಲಿ ಅವರ ತತ್ವ ಸಿದ್ದಾಂತಗಳು ಹೆಚ್ಚು ಅನುಸರಿಸಬೇಕು ಎಂದರು.
ಉಪನ್ಯಾಸ ನೀಡಿದ ಕವಿ ಡಾ. ಶರಣಪ್ಪ ಗಬ್ಬೂರು ಮಾತಾನಾಡಿ ಸಂವಿಧಾನವು ಮನುಷ್ಯ ಕೇಂದ್ರೀತವಾಗಿರದೆ, ಅದು ಜೀವ ಕೇಂದ್ರೀತವಾಗಿದೆ. ಹಾಗಾಗಿ ಅದು ಈ ಸಮಾಜದ ಕಟ್ಟಕಡೆಯ ಮನುಷ್ಯನಿಗಾಗಿ ತುಡಿಯುತ್ತದೆ. ಸಮಾನತೆ ಸಹಬಾಳ್ವೆ ಸಹೋದರತ್ವದ ಮೂಲ ಮಂತ್ರವನ್ನು ಹೇಳುತ್ತಾ ಪ್ರಾಣಿ ಪಕ್ಷಿ ಗಿಡ ಮರ ಸಕಲ ಜೀವ ರಾಶಿಗಳ ಜೀವವಿದೆ. ಅನೇಕ ಕ್ಷೇತ್ರಗಳ ಕಾರ್ಯವೈಖರಿಯನ್ನು ಒಳಗೊಂಡ ಸಂವಿಧಾನ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಹತ್ತೊಂಬತ್ತನೆಯ ಶತಮಾನದ ಪೂರ್ವ ಕಾಲದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜಾತಿಯತೆಯಿಂದ ಅವರನ್ನು ಮೂಲೆಗುಂಪಾಗಿಸಿದ ರೀತಿಯನ್ನು ವಿ?ದಿಸುತ್ತಾ ಅದರೂ ಅಸ್ಪೃಶ್ಯತೆಯ ಹಸಿವನ್ನು ಮೆಟ್ಟಿ ನಿಂತ ವಿಶ್ವದ ಏಕೈಕ ಜ್ಞಾನಿ. ನೆಲ್ಸನ್ ಮಂಡೆಲ್, ಮಾರ್ಟಿನ್ ಲೂಥರ್ ಕಿಂಗ್, ಗಾಂಧೀಜಿ, ಲಿಂಕನ್ ಅವರ ಸಾಲಿನಲ್ಲಿ ಮಿನುಗುವಂತ ನಕ್ಷತ್ರ ಎಂದು ಹೇಳುತ್ತಾ ಭಗವಾನ್ ಬುದ್ದ, ಪೆರಿಯಾರ್, ಶಾಹು ಮಹಾರಾಜ, ನಾಲ್ವಡಿ ಕೃಷ್ಣ ರಾಜ ಒಡೆಯರ ಅವರ ಜೀವಪರವಾದ ತತ್ವ ಸಿದ್ಧಾಂತಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿದ ವಿಶ್ವದ ಶ್ರೇಷ್ಠ ವ್ಯಕ್ತಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಪ್ರಾಂಶುಪಾಲ ಮಂಜುನಾಥ ಇಡೀ ಜನಸಮುದಾಯವನ್ನು ಮನುಷ್ಯತ್ವದ ಕಡೆಗೆ ಕರೆದೊಯ್ದ ಏಕೈಕ ವ್ಯಕ್ತಿ. ಅವರೊಬ್ಬ ಶಕ್ತಿ. ಸಂಪ್ರದಾಯವನ್ನು ಬದಿಗೊತ್ತಿ ದೇವರು ಪುರಾಣ ಶಾಸ್ತ್ರ ಮುಂತಾದವುಗಳೆಲ್ಲವೂ ಸುಳ್ಳು. ಮೌಢ್ಯತೆಗೆ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ವೈಚಾರಿಕತೆಯ ಕಡೆಗೆ ಜ್ಞಾನವನ್ನು ಹರಿಸಿ. ಮಾನವರೆಲ್ಲರೂ ಒಂದು ಎನ್ನುವ ನಿಟ್ಟಿನಲ್ಲಿ ವಿಶ್ವಮಾನವ ಸಂದೇಶದ ಕಡೆಗೆ ಮನುಜಮತ ವಿಶ್ವಪಥದ ಕಡೆಗೆ ಸಾಗಬೇಕು ಎಂದರು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕರಾದ ನರಸಿಂಹಮೂರ್ತಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಮಂಜುಳ, ಕನ್ನಡ ಉಪನ್ಯಾಸಕಿ ಶಿಲ್ಪ, ಗ್ರಂಥಪಾಲಕಿ ಹಾಗೂ ಮಾಹಿತಿ ಕೇಂದ್ರದ ವನಜ ಮುಂತಾದವರು ಉಪಸ್ಥಿತರಿದ್ದರು.