ಅಂಬೇಡ್ಕರ್ ಸಂಘದ ಚುನಾವಣೆ ಹಲವರಿಂದ ನಾಮಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05: ನಗರದ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಚುನಾವಣೆಗೆ ಇಂದು ಸಂಘದ ಮಾಜಿ ಅಧ್ಯಕ್ಷರು ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದ್ದಾರೆ.
ಸಂಘದ 25 ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸ್ಥಾನಕ್ಕೆ ಆರಂಭಿಕ ದಿನವಾದ ಮೊನ್ನೆ 13 ಜನ ತಮ್ಮ ನಾಮಪತ್ರ ಸಲ್ಲಿಸಿದ್ದರು. ಇಂದು ಎಂ.ವಿ.ಎರುಕುಲಸ್ವಾಮಿ ನೇತೃತ್ವದ ತಂಡದಿಂದ 25 ಜನ‌ ನಾಮಪತ್ರ ಸಲ್ಲಿಸಿದ್ದಾರೆ.
ಸೆ 10 ನಾಮಪತ್ರ ಸಲ್ಲಿಸಲು ಕೊನೆಯದಿನವಾಗಿದೆ. ಇಂದು ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರೆಂದರೆ ಎರುಕಲಸ್ವಾಮಿ, ಚಿದಾನಂದಪ್ಪ, ವೆಂಕಟೇಶ್ ಹೆಗಡೆ, ಸೋಮಶೇಖರ, ಶೇಕಣ್ಣ, ದಾನಪ್ಪ, ಕೃಷ್ಣಪ್ಪ, ನಾಗಪ್ಪ ಮೊದಲಾದವರಾಗಿದ್ದಾರೆ.

Attachments area