ಅಂಬೇಡ್ಕರ್ ಸಂಘದಲ್ಲಿ ಸ್ವಾತಂತ್ರ್ಯೋತ್ಸವ


ಬಳ್ಳಾರಿ, ಆ.15 ಬಳ್ಳಾರಿ ಜಿಲ್ಲಾ ಡಾಕ್ಟರ್ ಬಿ .ಆರ್. ಅಂಬೇಡ್ಕರ್ ಸಂಘದ ವತಿಯಿಂದ ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿತು ಹಾಗೂ ಉಚಿತವಾಗಿ ಅಂಬೇಡ್ಕರ್ ಸಂಘದಲ್ಲಿ 6 ತಿಂಗಳ ಕಾಲ ಕಂಪ್ಯೂಟರ್ ಕ್ಲಾಸಸ್  ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು ಹಾಗೂ  ದೇಶದ ಏಳಿಗೆಗಾಗಿ ಬಹಳಷ್ಟು ಜನ ಮಹಾನ್ವಿಯರು ತಮ್ಮ ತ್ಯಾಗ ಬಲಿದಾನ ಮುಖಾಂತರ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿರುತ್ತಾರೆ ಎಂದು ಅವರು ಹೇಳಿದರು ಹಾಗೂ ಸಮಾಜದ ಏಳಿಗೆಗಾಗಿ ಅಕ್ಷರ ಜ್ಞಾನದ ಅವಶ್ಯಕತೆ ತುಂಬಾ ಇದೆ ಎಂದು ಅಧ್ಯಕ್ಷರಾದ ಬಿ.ಕೆ ಅನಂತ್ ಕುಮಾರ್ ಅವರು ಹೇಳಿದರು ಈ ಒಂದು ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರುಗಳಾದ ಕೆ. ಗಿರಿಮಾಲಪ್ಪ ತಿಪ್ಪೇಸ್ವಾಮಿ ಹಾಗೂ ಪದಾಧಿಕಾರಿಗಳಾದ ಶಿವಕುಮಾರ್ , ರಘುನಾಥ್ ಹಾಗೂ ನಿರ್ದೇಶಕರಾದ, ಭೀಮ್ ದಾಸ್, ಮುಕ್ಕಣ್ಣ,ನೀಲಕಂಠ ,ವೀರಯ್ಯ ಅಜಿವ ಸದಸ್ಯರಗಳಾದ ಹುಲುಗಪ್ಪ ಶಿವಪ್ಪ ಗೋವಿಂದಪ್ಪ, ನಾಗಪ್ಪ, ಪಂಪಾಪತಿ ಕಂಪ್ಯೂಟರ್ನ ತರಬೇತಿದಾರರಾದ ಅಂಬಿಕಾ ರವಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಎಲ್ಲರೂ ಈ ಒಂದು ಕಾರ್ಯಕ್ರಮಕ್ಕೆ ಸೇರಿ ಯಶಸ್ವಿಗೊಳಿಸಿರುತ್ತಾರೆ ಹಾಗೂ ಶಿವಪ್ರಸಾದ್ ಅವರು ಅಚ್ಚುಕಟ್ಟಾಗಿ ನಿರೂಪಣೆಯನ್ನು ಮಾಡಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿರುತ್ತಾರೆ

One attachment • Scanned by Gmail