ಅಂಬೇಡ್ಕರ್ ವಸತಿ ಶಾಲೆಗೆ ಶಾಸಕರ ದಿಢೀರ್ ಭೇಟಿ: ಪರಿಶೀಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.09: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನ್ನಹಳ್ಳಿ ಬಳಿ ಇರುವ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಹೆಚ್.ಟಿ.ಮಂಜು ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಿಡೀರ್ ಭೇಟಿ ನೀಡಿದ ಶಾಸಕ ಹೆಚ್.ಟಿ.ಮಂಜು ಬಳಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಲುಸಾಲು ದೂರುಗಳನ್ನು ಸಲ್ಲಿಸಿದರು.ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಣೆ ಮಾಡಿ ಹುಳು ಮಿಶ್ರಿತ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಪ್ರಾಂಶುಪಾಲ ಮತ್ತು ವಾರ್ಡನ್ ಅವರುಗಳನ್ನು ತರಾಟೆಗೆ ತೆಗೆದುಕೊಂಡರು.
ಮಕ್ಕಳಿಗೆ ನೀಡುವ ದಿನನಿತ್ಯದ ಆಹಾರ ಪದಾರ್ಥಗಳು ಹಾಗೂ ಮಾಸಿಕವಾಗಿ ನೀಡುವ ಸಾಮಗ್ರಿಗಳನ್ನು ಕೂಡ ನೀಡಿರುವುದಿರುವುದಕ್ಕೆ ಕಾರಣ ಏನು ಎಂದು ತರಾಟೆಗೆ ತೆಗೆದುಕೊಂಡರು.
ಇಲ್ಲಿ ಕಲಿಯುತ್ತಿರುವ ಮಕ್ಕಳು ದೇವರಿದ್ದಂತೆ ಮಕ್ಕಳಿಗೆ ಮೋಸ ಮಾಡಿದರೆ ಭಗವಂತ ನಿಮಗೆ ಎಂದಿಗೂ ಕ್ಷಮಿಸುವುದಿಲ್ಲ ಇಲ್ಲಿ ಕಲಿಯಲು ಬಂದಿರುವ ಮಕ್ಕಳ ತಮ್ಮ ಮಕ್ಕಳು ಎಂಬ ಭಾವನೆಯಿಂದ ಆರೈಕೆ ಮಾಡಬೇಕು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ಮಕ್ಕಳ ಪೆÇೀಷಣೆ ಮಾಡಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಯಾವುದೇ ಕಾರಣಕ್ಕೆ ಕಳಪೆ ಆಹಾರ ನೀಡುವುದನ್ನು ಸಹಿಸುವುದಿಲ್ಲ ಎಂದ ಶಾಸಕರು ಪೆÇೀಷಕರು ನಿಮ್ಮಗಳನ್ನ ನಂಬಿ ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುತ್ತಾರೆ ಅವರಿಗೆ ನಂಬಿಕೆ ದ್ರೋಹ ಮಾಡುವ ಕೆಲಸ ಮಾಡಬೇಡಿ ಎಂದ ಶಾಸಕರು ಮುಂದೆ ಈ ರೀತಿಯ ದೂರುಗಳು ಬಂದರೆ ಸೂಕ್ತ ಕ್ರಮ ಜರುಗಿಸುವುದಾಗಿ ವಸತಿ ಶಾಲೆಯ ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಕ್ಕಳ ಕುಂದು ಕೊರತೆಗಳನ್ನು ಆಲಿಸಿದಾಗ ವಿದ್ಯಾರ್ಥಿಗಳು
ಕನ್ನಡ ಶಿಕ್ಷಕರಾದ ರೋಹಿತ್ ಅವರನ್ನು ವರ್ಗಾವಣೆ ಮಾಡಬಾರದು ಇದೇ ಶಾಲೆಯಲ್ಲಿ ಉಳಿಸಬೇಕೆಂದು ಮಕ್ಕಳು ಕಣ್ಣೀರು ಹಾಕಿ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.