ಅಂಬೇಡ್ಕರ್ ವಸತಿ ನಿಲಯ ವಾರ್ಡ್‌ನ್ ನಾಪತ್ತೆ? ಹುಡುಕಿ ಕೊಡಿ ವಿದ್ಯಾರ್ಥಿಗಳ ಅಳಲು

ದುರಗಪ್ಪ ಹೊಸಮನಿ
ಲಿಂಗಸುಗೂರು.ನ.೧೮-ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದಲ್ಲಿರುವ ಮೇಟ್ರಿಕ್ ನಂತರ ಅಂಬೇಡ್ಕರ್ ವಸತಿ ನಿಲಯ ವಾರ್ಡ್‌ನ್ ಮಾರುತಿ ಭೇಟಿ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ ವಸತಿ ನಿಲಯದ ವಾರ್ಡ್‌ನ್ ಮಾರುತಿ ಇವರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ವಿದ್ಯಾರ್ಥಿಗಳ ಆರೋಪಿಸಿದ್ದಾರೆ.
ಈ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲ ಮತ್ತು ಶುಚಿಯಾಗಿ ಅಡುಗೆ ಮಾಡುವುದಿಲ್ಲ ಹಾಗೂ ಗ್ರಂಥಾಲಯ ಸೌಲಭ್ಯ ಒದಗಿಸಲು ವಾರ್ಡ್‌ನ್ ಮಾರುತಿ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಎಂ.ರವರಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ವರ್ಗಾವಣೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ವಾದ. ಇಂತಹ ವಾರ್ಡ್‌ನ್ ಇರುವುದರಿಂದಲೇ ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಅಂಬೇಡ್ಕರ್ ವಸತಿ ನಿಲಯ ದಿನಗೂಲಿ ಕಾರ್ಮಿಕ ನೌಕರರು ಕೂಡ ನಮಗೆ ಯಾವುದೇ ರೀತಿಯ ಸ್ಪಂದನೆ ಮಾತಾಡುತ್ತಿಲ್ಲ. ಅಧಿಕಾರಿಗಳಿಗೆ ತಮ್ಮ ನಿವೇದನೆ ತೊಡಿಕೊಂಡರು.
ವಸತಿ ನಿಲಯಕ್ಕೆ ಬಾರದ ವಾರ್ಡ್‌ನ್ ಮಾರುತಿ ಈ ವಾರ್ಡ್‌ನ್ ಕೇವಲ ಬೆಂಗಳೂರು ರಾಯಚೂರು ಕೊಪ್ಪಳ ಮತ್ತು ಇತರೆ ಊರುಗಳಿಗೆ ತೆರಳಲು ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಹೋಗುವದು ಈ ವಾರ್ಡ್‌ನ್ ಚಾಳಿಯಾಗಿದೆ ಎಂದರೆ ತಪ್ಪಾಗಲಾರದು ಸರ್ಕಾರದ ನಿಯಮ ಪ್ರಕಾರ ಪ್ರತಿಯೊಬ್ಬ ವಾರ್ಡ್‌ನ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು.
ಆದರೆ ಇಲ್ಲಿನ ವಸತಿ ನಿಲಯ ಪಾಲಕರು ಬೇಕಾಬಿಟ್ಟಿಯಾಗಿ ಕೆಲಸ ಮಾಡುವುದು ಇವರ ಮೂಲ ಹುದ್ದೆಯಾಗಿದೆ ತಾಲೂಕಿನ ಬಹುತೇಕ ವಸತಿ ನಿಲಯದಲ್ಲಿ ಇದೆ. ಸಮಸ್ಯೆಗಳ ತಾಣವಾಗಿದೆ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಇವರ ಬೇಜವಾಬ್ದಾರಿತನದಿಂದ ವಸತಿ ನಿಲಯ ಗಬ್ಬೆದ್ದು ಹೋಗಿದೆ.
ಜಿಲ್ಲಾ ಮಟ್ಟದ ಭೇಟಿ ನೀಡದ ಉಪ ನಿರ್ದೇಶಕರು!!
ತಾಲುಕಿನಲ್ಲಿರುವ ಪ್ರತಿಯೊಂದು ವಸತಿ ನಿಲಯಕ್ಕೆ ತಿಂಗಳಿಗೊಮ್ಮೆ ಭೇಟಿ ನಿಡಲು ಇಲಾಖೆಯ ಮಾರ್ಗಸೂಚಿ ಇದ್ದರು ಕೂಡ ಇಲ್ಲದಂತಾಗಿದೆ ಸರ್ಕಾರದ ನಿಯಮ ಪ್ರಕಾರ ಸಮಾಜ ಕಲ್ಯಾಣ ಇಲಾಖೆಯ ಸಾಹಾಯಕ ನಿರ್ದೆಶಕರು ಕೆವಲ ಕಾಟಾಚಾರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗಿದ್ದಾರೆ.
ಜಿಲ್ಲಾ ಮಟ್ಟದ ಉಪನಿರ್ದೇಶಕರು ಕೂಡ ತಾಲೂಕು ಮಟ್ಟದ ವಸತಿ ನಿಲಯಕ್ಕೆ ಭೇಟಿ ನೀಡದೆ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಇರುವುದೇ ಇದಕ್ಕೆ ಮೂಲ ಕಾರಣವಾಗಿದೆ ಮತ್ತು ಉಪನಿರ್ದೇಶಕರು ಸತೀಶ್ ಕೆ ಎಚ್ ಇವರು ಸಭೆ ಸಮಾರಂಭದಲ್ಲಿ ಬೀಜಿ ಯಾಗಿರುತ್ತಾರೆ ಏಕೆಂದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಭೆ ಮೀಟಿಂಗ್ ಭಾಗವಹಿಸಲು ಹೊರಡುವುದು. ಸಾಮಾನ್ಯವಾಗಿರುವದು ವಾಡಿಕೆ ಯಾಗಿದೆ ಆದರೆ ಅಧಿಕಾರಿಗಳು ಸಭೆ ಮೀಟಿಂಗ್ ಸಮಾರಂಭಗಳಲ್ಲಿ ಬಿಜಿಯಾಗದೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಅಧಿಕಾರಿಗಳ ಅಸಡ್ಡೆ ವಾರ್ಡ್‌ನ್ ಚೆಲ್ಲಾಟ ವಿದ್ಯಾರ್ಥಿಗಳ ತೊಳಲಾಟ!!!
ಲಿಂಗಸುಗೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಡಿದ್ದೆ ಆಟ ವಾರ್ಡ್ ನ್ ಗಳ ಮಜಾ ವಿದ್ಯಾರ್ಥಿಗಳಿಗೆ ಸಜಾ ಎಂಬುದು ಮೇರ್ಟಿಕ್ ನಂತರ ವಸತಿ ಬಾಲಕ ಬಾಲಕಿಯರ ನಿಲಯದಲ್ಲಿ ಕಂಡುಬರುತ್ತದೆ ಅದರಲ್ಲೂ ಅಂಬೇಡ್ಕರ್ ಮೇಟ್ರಿಕ್ ನಂತರ ವಸತಿ ನಿಲಯದ ವಾರ್ಡ್ ನ್ ಮಾರುತಿ ಬೆಕಾಬಿಟ್ಟಿ ಸರ್ಕಾರಿ ಕೇಲಸ ಮಾಡುತ್ತಿದ್ದಾರೆ ಇಂತಹ ನಿಲಯ ಪಾಲಕನನ್ನು ಅಮಾನತ್ತು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಸತಿ ನಿಲಯದಲ್ಲಿ ಸಮಸ್ಯೆಗಳು ಎದುರಾಗುವದರಲ್ಲಿ ಯಾವುದೇ ಸಂಶಯವಿಲ್ಲ ಕೂಡಲೇ ತಾಲುಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಎಂ ರವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಲು ಪ್ರಯತ್ನ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಸ್ಯೆಗಳನ್ನು ದೂರ ಮಾಡುವ ಮೂಲಕ ಇಲಾಖೆಯ ಅಧಿಕಾರಿಗಳು ಮುಂದಾಗುತ್ತಾರೆ ಎಂದು ಕಾದುನೋಡಬೇಕಿದೆ.