ಅಂಬೇಡ್ಕರ್ ರರು ರಾಷ್ಟ್ರೀಯತೆಯ ಹರಿಕಾರರು

????????????????????????????????????

ಬಳ್ಳಾರಿ, ಏ.16: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದಿನಾಂಕ: 15.04.2021 ರಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ 130ನೇ ಜಯಂತ್ಯೋತ್ಸವ ಅಂಗವಾಗಿ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಪೀಠ, ಸಾಮರಸ್ಯ ವೇದಿಕೆ, ಬಳ್ಳಾರಿ. ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಡಾ. ಬಿ.ವಿ ವಸಂತಕುಮಾರ್ ಡಾ. ಬಿ.ಆರ್ ಅಂಬೇಡ್ಕರ್ ರವರ ರಾಷ್ಟ್ರಿಯ ಪರಿಕಲ್ಪನೆ ಕುರಿತು ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್‍ರವರು ಕಂಡಂತಹ ರಾಷ್ಟ್ರಿಯತೆ ಅಖಂಡ ಭಾರತದ ಕನಸುಗಳು ಸಂವಿಧಾನದ ಮೂಲಕ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಇವುಗಳ ಬಗ್ಗೆ ಮನವರಿಕೆ ಮಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಜಾತಿ, ಸಮುದಾಯ ಮತ್ತು ಮೀಸಲಾತಿಗಳಿಗೆ ಸೀಮಿತಗೊಳಿಸದೆ ಅವರೊಬ್ಬ ಮಹಾನ್ ರಾಷ್ಟ್ರಿಯತೆಯ ಹರಿಕಾರ ಎಂಬುದನ್ನು ಗಮನಕ್ಕೆ ತಂದರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಮರಸ್ಯ ವೇದಿಕೆಯ ಟಿ ಪ್ರಸನ್ನ ರವರು ಸಮಾಜದ ಅಭ್ಯುದಯಕ್ಕಾಗಿ ಸಾಮರಸ್ಯ ವೇದಿಕೆಯು ಹಮ್ಮಿಕೊಳ್ಳುವ ಚಟುವಟಿಕೆಗಳ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಸಿದ್ದು ಪಿ ಅಲಗೂರ ರವರು ಡಾ. ಬಿ.ಆರ್ ಅಂಬೇಡ್ಕರ್‍ರವರು ಕಂಡ ಕನಸಿನ ನವ ಭಾರತದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಾಕಷ್ಟು ಅಧ್ಯಯನ ಮಾಡಿ ಅವರ ಕನಸನ್ನು ನನಸು ಮಾಡಿಕೊಳ್ಳಲು ಶ್ರಮ ಪಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಚರ್ಚೆ ಮತ್ತು ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ ಶಶಿಕಾಂತ ಎಸ್ ಉಡಿಕೇರಿ ರವರು ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಧರ ಕೆಲ್ಲೂರ್ ನಡೆಸಿಕೊಟ್ಟರು.
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಡಾ. ಕೆ.ಸಿ ಪ್ರಶಾಂತ್ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಪೀಠದ ಸಂಯೋಜಕಿ ಡಾ. ಸುಷ್ಮಾ ಎನ್ ಜೋಗನ್ ರವರು ಕಾರ್ಯಕ್ರಮದಲ್ಲಿದ್ದರು
ಅಂಬೇಡ್ಕರ್ ರವರ ಸಾಹಿತ್ಯ ಕುರಿತ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.